ಸುಬ್ರಹ್ಮಣ್ಯ: ಪ್ರಾಜೆಕ್ಟ್ ನೆಪದಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿ ಅತ್ಯಾಚಾರ- ನಗ್ನ ವಿಡಿಯೋ ಮಾಡಿಟ್ಟುಕೊಂಡು ಹಣ ನೀಡಲು ಬೆದರಿಕೆ- ಬಲೆಗೆ ಬಿದ್ದ ಪಾಪಿ ಶಿಕ್ಷಕ
ಮಂಗಳೂರು; ಪ್ರಾಜೆಕ್ಟ್ ನೆಪದಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಮನೆಗೆ ಬರಹೇಳಿ ಆಕೆಯನ್ನು ಅತ್ಯಾಚಾರ ಮಾಡಿದ ಶಿಕ್ಷಕನನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.
ಸುಬ್ರಹ್ಮಣ್ಯದ ಎಸ್ ಎಸ್ ಪಿ ಯು ಕಾಲೇಜಿನ ಅಧ್ಯಾಪಕ ಗುರುರಾಜ್ ಬಂಧಿತ ಆರೋಪಿ. ಈತ 2018 ರಲ್ಲಿ ತನ್ನ ಕಾಲೇಜಿನ ವಿದ್ಯಾರ್ಥಿನಿ ಅಪ್ರಾಪ್ತ ಪ್ರಾಯದ ಬಾಲಕಿಯನ್ನು ಪ್ರಾಜೆಕ್ಟ್ ಮಾಡಲು ಮನೆಗೆ ಕರೆಸಿಕೊಂಡಿದ್ದ. ಮನೆಗೆ ಬಂದಿದ್ದ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಈತ ಆಕೆಯ ನಗ್ನ ವಿಡಿಯೋ ವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ. ಇದನ್ನು ತೋರಿಸಿ ಅತ್ಯಾಚಾರ ಮಾಡಿದ್ದನ್ನು ಯಾರಿಗೂ ತೋರಿಸಬಾರದೆಂದು ಬೆದರಿಸಿದ್ದ. ಇದೇ ವಿಡಿಯೋ ತೋರಿಸಿ ಆಕೆಯನ್ನು ಬೆದರಿಸಿ ಅತ್ಯಾಚಾರವೆಸಗುತ್ತಿದ್ದ.
ಇತ್ತೀಚೆಗೆ ಮನೆಯಿಂದ ಹಣ ತರಲು ಬೆದರಿಕೆಯೊಡ್ಡಿದ ಈತ ಹಣ ಕೊಡದಿದ್ದರೆ ವಿಡಿಯೋ ಬೇರೆಯವರಿಗೆ ಕೊಡುವುದಾಗಿ ಬೆದರಿಸಿದ್ದ.ಈ ವಿಚಾರವನ್ನು ಬಾಲಕಿ ಮನೆಯಲ್ಲಿ ತಿಳಿಸಿದ್ದು , ಇದೀಗ ಈಕೆಯ ತಾಯಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಕ್ಷಕ ಗುರುರಾಜ್ ನನ್ನು ಬಂಧಿಸಿದ್ದಾರೆ.