ನನ್ನ ನಗ್ನ ವಿಡಿಯೋ ನೋಡಿ ಶಿಲ್ಪಾ ಖುಷಿಪಟ್ರಂತೆ...ನಟಿಯ ಸ್ಪೋಟಕ ಹೇಳಿಕೆ..
Sunday, August 8, 2021
ಮುಂಬೈ: ಬ್ಲೂಫಿಲ್ಮಂ ಹಗರಣದಲ್ಲಿ ಸಿಲುಕಿರುವ ಉದ್ಯಮಿ, ರಾಜ್ ಕುಂದ್ರಾ ಜೊತೆ ಸಂಪರ್ಕದಲ್ಲಿರುವ ಅವರನ್ನ ಕರೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟಿ ಶೆರ್ಲಿನ್ ಅವರನ್ನು ಕೂಡಾ ವಿಚಾರಣೆಗೆ ಒಳಪಡಿಸಿದ್ದು ಈಗ ಅವರು ಕೆಲವೊಂದು ಸ್ಪಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಬ್ಲೂಫಿಲ್ಮಂ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಆರೋಪ ಹೊತ್ತ ನಟಿ ಶೆರ್ಲಿನ್ ಚೋಪ್ರಾರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಕೆಲವೊಂದು ಸ್ಫೋಟಕ ಮಾಹಿತಿಯನ್ನು ನಟಿ ಶೆರ್ಲಿನ್ ಪೊಲೀಸರಿಗೆ ತಿಳಿಸಿದ್ದಾರೆ. ರಾಜ್ ಕುಂದ್ರಾ ನನ್ನಿಂದ ಬೋಲ್ಡ್ ಎನಿಸುವ ಕೆಲವು ದೃಶ್ಯಗಳನ್ನು ಮಾಡಿಸಿಕೊಂಡಿದ್ದಾರೆ. ‘ರಾಜ್ ಕುಂದ್ರಾ ಅವರು ತಮ್ಮ ಕಂಪನಿಯಾಗಿರುವ ಆರ್ಮ್ಸ್‌ಪ್ರೈಮ್ ಜೊತೆಗಿನ ಒಪ್ಪಂದದ ಬಗ್ಗೆ ನನ್ನ ಬಳಿ ಮಾತನಾಡುತ್ತಾ ಕೆಲವೊಂದು ದೃಶ್ಯಗಳನ್ನು ಮಾಡಲು ಹೇಳಿದ್ದರು. ನಾನು ಒಪ್ಪಂದ ಮಾಡಿಕೊಂಡಿದ್ದೆ. ಅದರ ಅಂಗವಾಗಿ ಕಾಮಪ್ರಚೋದಕ, ಅರೆ ನಗ್ನ ಮತ್ತು ನಗ್ನ ವಿಷಯವನ್ನು ಚಿತ್ರೀಕರಿಸುತ್ತಿದ್ದರು. ಅವುಗಳನ್ನು ತಮ್ಮ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ’ಈ ವಿಡಿಯೋಗಳನ್ನು ತಾವು ಪತ್ನಿ ಶಿಲ್ಪಾ ಶೆಟ್ಟಿಗೂ ತೋರಿಸುವುದಾಗಿ ಕುಂದ್ರಾ ನನ್ನ ಬಳಿ ಹೇಳಿಕೊಂಡಿದ್ದಾರೆ. ಇದನ್ನು ಶಿಲ್ಪಾ ಕೂಡ ಇಷ್ಟಪಡುತ್ತಿದ್ದರಂತೆ. ಇದನ್ನು ಕೇಳಿ ನನಗೆ ಸಂತೋಷವಾಗುತ್ತಿತ್ತು. ಶಿಲ್ಪಾ ಶೆಟ್ಟಿ ಮತ್ತು ಆಕೆಯ ಸಹೋದರಿ ಶಮಿತಾ ಶೆಟ್ಟಿ ಕೂಡ ಈ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಸಂಭಾಷಣೆಯ ಸಮಯದಲ್ಲಿ ರಾಜ್ ಕುಂದ್ರಾ ಹೇಳಿದ್ದರು’ ಎಂದು ಪೊಲೀಸರಿಗೆ ಶೆರ್ಲಿನ್ ವಿವರಿಸಿದ್ದಾರೆ.
ಒಪ್ಪಂದವಿಲ್ಲದೆ ಮಾಡಿದ ಈ ಮೂರು ವಿಡಿಯೋಗಳಿಗೆ ರಾಜ್ ಕುಂದ್ರಾ ತನ್ನ ಹಣವನ್ನು ಇನ್ನೂ ನೀಡಿಲ್ಲ. ಎಂದು ಶೆರ್ಲಿನ್ ಪೊಲೀಸರಿಗೆ ವಿವರಿಸಿದ್ದಾರೆ.