-->

ಕೆಬಿಸಿಯಲ್ಲಿ‌ 5 ಕೋಟಿ ರೂ. ಗೆದ್ದ ಬಳಿಕ ಜೀವನ ದುರ್ಬರ, ದಾಂಪತ್ಯದಲ್ಲಿಯೂ ಬಿರುಕು: ಬದುಕ‌ ಕತೆಯ ತೆರೆದಿಟ್ಟ ಸುಶೀಲ್ ಕುಮಾರ್

ಕೆಬಿಸಿಯಲ್ಲಿ‌ 5 ಕೋಟಿ ರೂ. ಗೆದ್ದ ಬಳಿಕ ಜೀವನ ದುರ್ಬರ, ದಾಂಪತ್ಯದಲ್ಲಿಯೂ ಬಿರುಕು: ಬದುಕ‌ ಕತೆಯ ತೆರೆದಿಟ್ಟ ಸುಶೀಲ್ ಕುಮಾರ್

ಮುಂಬೈ: ಕಾಸಿದ್ದರೆ ಏನೂ ಬೇಕಾದರೂ ಮಾಡುತ್ತಿದ್ದೆವು ಎಂದು ನಾವು ಅಂದುಕೊಂಡು ಇರುತ್ತಿರುತ್ತೇವೆ. ಆದರೆ ಕೆಲವೇ ಕ್ಷಣದಲ್ಲಿ ಐದು ಕೋಟಿ ರೂ. ಗೆದ್ದು ಬೀಗಿದ್ದ ಮನುಷ್ಯ ಇಂದು ಬದುಕನ್ನು ನರಕ ಮಾಡಿಕೊಂಡ ದುಡ್ಡಿನ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ಹಾಗಾದರೆ ಈ ಕರೋಡ್​ಪತಿ ಕಥೆಯಾದರೂ ಏನು ಎಂದು ತಿಳಿಯಲು ಈ ಸುದ್ದಿ ನೋಡಿ. 






ಬಾಲಿವುಡ್​ ನ ದೈತ್ಯ ಪ್ರತಿಭೆ ಅಮಿತಾಭ್​ ಬಚ್ಚನ್​ ನಡೆಸಿರುವ ಕೌನ್​ ಬನೇಗಾ ಕರೋಡ್​ಪತಿ ಸೀಸನ್​ 5ನಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೇಳಿ ಐದು ಕೋಟಿ ರೂ. ಗೆದ್ದವರು ಬಿಹಾರ ಮೂಲದ ಸುಶೀಲ್‌ ಕುಮಾರ್‌. ಇಷ್ಟು ಹಣ ಗೆದ್ದು ಅವರ ಬದುಕು ಎಷ್ಟು ಸುಂದರವಾಗಿರಬಹುದು. ಮಧ್ಯಮ ಕುಟುಂಬದ ಸುಶೀಲ್​ ಕುಮಾರ್​ ಅವರ ಬದುಕೇ ಬದಲಾಗಿರಬಹುದು.‌ ಅವರ ಜೀವನ ಸ್ವರ್ಗವಾಗಿರಬಹುದು ಎಂದುಕೊಳ್ಳುವವರೇ ಎಲ್ಲ. ಆದರೆ ಅಸಲಿಯತ್ತು ಬೇರೆಯೇ ಇತ್ತು. ಈ ದುಡ್ಡು ಸುಶೀಲ್​ ಕುಮಾರ್​ ಅವರನ್ನು ಬೀದಿಗೆ ತಂದು ನಿಲ್ಲಿಸಿತ್ತು. ಪತ್ನಿಯ ಜತೆಗೆ ಸಂಬಂಧ ಕಳೆದುಕೊಳ್ಳುವಷ್ಟರ ಮಟ್ಟಿಗೆ ಕೌಟುಂಬಿಕ ಸಮಸ್ಯೆ ಎದುರಾಯಿತು. ಎಲ್ಲವನ್ನೂ ಕಳೆದುಕೊಂಡು ಜೀವನವೇ ಬೇಡ ಎನ್ನುವಷ್ಟರ ಮಟ್ಟಿಗೆ ಅವರ ಬದುಕು ಹೋಯಿತು. 

ಹೀಗೆಂದು ಖುದ್ದು ಸುಶೀಲ್​ ಕುಮಾರ್​ ಅವರೇ ಹೇಳಿದ್ದಾರೆ. "ಕೌನ್‌ ಬನೇಗಾ ಕರೋಡ್‌ಪತಿ ಗೆದ್ದ ಬಳಿಕ ನನ್ನ ಬದುಕಿನ ಅತ್ಯಂತ ಕೆಟ್ಟ ಕಾಲ"ಎಂಬ ಶೀರ್ಷಿಕೆಯಡಿಯಲ್ಲಿ ಅವರು ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. ‘2015-16 ನನ್ನ ಜೀವನದ ಸವಾಲಿನ ಕಾಲಘಟ್ಟವಾಗಿತ್ತು. ನನಗೆ ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿರಲಿಲ್ಲ. ಸ್ಥಳೀಯ ಮಟ್ಟದಲ್ಲಿ ನಾನು ಸೆಲೆಬ್ರಿಟಿಯಾಗಿ ತಿಂಗಳಿಗೆ 10ರಿಂದ 15 ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಅದರಿಂದಾಗಿ ನನಗೆ ವಿದ್ಯಾಭ್ಯಾಸವನ್ನೂ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಕಾರ್ಯಕ್ರಮದಲ್ಲಿ ನೀವೇನು ಮಾಡುತ್ತಿದ್ದೀರಿ ಎಂದು ಕೇಳುತ್ತಿದ್ದರು. ಆದರೆ ಆ ಸಮಯದಲ್ಲಿ ನಾನೇನೂ ಮಾಡುತ್ತಿರಲಿಲ್ಲ. ಆದ್ದರಿಂದ ಸುಳ್ಳು ಹೇಳಬೇಕಾಗಿ ಬಂತು. ಇದೇ ಕಾರಣದಿಂದ ನಾನು ಯಾವುದಾದರೂ ವ್ಯವಹಾರದಲ್ಲಿ ಕೈಹಾಕುವ ಯೋಚನೆ ಮಾಡಿದೆ. ಏಕೆಂದರೆ ನನ್ನ ಬಳಿ ಇಷ್ಟೊಂದು ಹಣವಿತ್ತಲ್ಲ. ಆದರೆ ನನ್ನ ದುರದೃಷ್ಟಕ್ಕೆ ಹಲವಾರು ವ್ಯವಹಾರದಲ್ಲಿ ಹೂಡಿಕೆ ಮಾಡಿದರೂ ಅದು ನನ್ನ ಕೈಹಿಡಿಯಲಿಲ್ಲ. ಕೆಲವೊಬ್ಬರಿಗೆ ಇದೇ ಸಮಯದಲ್ಲಿ ದಾನವನ್ನೂ ಮಾಡಿದೆ. ಕೈಯಲ್ಲಿ ಕೆಲಸವಿರಲಿಲ್ಲ. ಮಾಡಿದ್ದೆಲ್ಲ ನಷ್ಟದ ಹಾದಿ ಹಿಡಿದವು. ಕೈಯಲ್ಲಿದ್ದ ದುಡ್ಡು ಖರ್ಚಾಗತೊಡಗಿತು. ಈ ನಡುವೆಯೇ ನಾನು ದಿಕ್ಕೇ ತೋಚದಂತಾಗಿ ಕುಳಿತುಬಿಟ್ಟೆ. ಇದೇ ಸಮಯದಲ್ಲಿ ಹೆಂಡತಿ ಜತೆಗಿನ ಸಂಬಂಧ ಹದಗೆಟ್ಟಿತು. ಇದರಿಂದ ವಿಪರೀತ ಮದ್ಯಪಾನ ದಾಸನಾಗಿಬಿಟ್ಟೆ. ನಂತರ ಚಿತ್ರರಂಗಕ್ಕೆ ಕೈಹಾಕುವ ಯೋಚನೆ ಮಾಡಿದೆ. ಚಲನಚಿತ್ರಗಳಲ್ಲಿ ನಿರ್ದೇಶಕರಾಗಲು ಮುಂಬೈಗೆ ಬಂದರು, ಆದರೆ ಮೊದಲು ಟಿವಿಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುವ ಸಲಹೆ ನೀಡಿದರು ಕೆಲವರು. ಆದರೆ ಅದು ಕೂಡ ಕೈಗೂಡಲಿಲ್ಲ. ಆದ್ದರಿಂದ ದಿಕ್ಕೇ ತೋಚದಂತಾಗಿ ಎಲ್ಲಾ ಚಟಗಳೂ ನನ್ನನ್ನು ಮುತ್ತಿಕೊಂಡುಬಿಟ್ಟವು. ಯಾವುದೂ ಕೈಗೂಡದಿದ್ದಾಗ ದೆಹಲಿಯಲ್ಲಿ ಕಾರು ಓಡಿಸಲು ಆರಂಭಿಸಿದೆ. ಅಲ್ಲಿಂದ ನನ್ನಂಥ ಕೆಟ್ಟ ಚಟದವರೇ ಸ್ನೇಹಿತರಾದರು. ಇದನ್ನೆಲ್ಲಾ ಸಹಿಸದ ನನ್ನ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಳು.

ನಾನು ಹೇಗಿದ್ದೆ, ಹೇಗಾದೆ ಎಂಬ ಬಗ್ಗೆ ಮುಂಬೈನಲ್ಲಿ ಗೆಳೆಯನ ಅಪಾರ್ಟ್‌ಮೆಂಟ್‌ನಲ್ಲಿ ಒಂಟಿಯಾಗಿ ಕುಳಿತಾದ ಸುದೀರ್ಘವಾಗಿ ಯೋಚಿಸಿದೆ. ಆಗಲೇ ಬದುಕು ಅರ್ಥವಾಯಿತು. ನನ್ನ ಬದುಕು ಕೂಡ ಬದಲಾಯಿತು. ನಾನು ಸಮಸ್ಯೆಗಳನ್ನು ಎದುರಿಸುವ ಬದಲು ಅವುಗಳಿಂದ ದೂರ ಓಡಿಹೋಗುತ್ತಿದ್ದೇನೆ ಎಂದು ತಿಳಿಯಿತು. ನಾನು ಅಹಂಕಾರಿ ಆಗಿದ್ದೆ ಎಂಬುದು ಅರಿವಾಯಿತು. ಅದರ ಬದಲು ಒಳ್ಳೆಯ ವ್ಯಕ್ತಿಯಾಗಿ ಇರಬೇಕು ಎನಿಸಿತು. ಮತ್ತೆ ಹಳ್ಳಿಗೆ ವಾಪಸಾದೆ. ಅಲ್ಲಿ ಶಿಕ್ಷಕನಾಗಿ ಮತ್ತು ಪರಿಸರವಾದಿಯಾಗಿ ಕೆಲಸ ಶುರು ಮಾಡಿದೆ. ಇದರಿಂದ ಈಗ ನನಗೆ ನೆಮ್ಮದಿ ಸಿಕ್ಕಿದೆ. ಧೂಮಪಾನ ಮತ್ತು ಮದ್ಯಪಾನ ವ್ಯಸನವನ್ನು ಸಂಪೂರ್ಣ ತ್ಯಜಿಸಿದೆ. ಪ್ರತಿ ದಿನ ಹೊಸ ಹುರುಪಿನೊಂದಿಗೆ ಎದ್ದೇಳುತ್ತೇನೆ. ನನ್ನಿಂದ ಪರಿಸರದ ಸೇವೆ ಆಗಲಿ ಅಂತ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ಸುಶೀಲ್‌ ಬರೆದುಕೊಂಡಿದ್ದಾರೆ. 

ನಿಮ್ಮ ಹೃದಯವು ಏನು ಮಾಡಲು ಬಯಸುತ್ತದೆಯೋ ಅದನ್ನು ಮಾಡುವುದರಲ್ಲಿ ನಿಜವಾದ ಸಂತೋಷವಿದೆ. ನಿಮ್ಮ ಅಹಂಕಾರವನ್ನು ನೀವು ಎಂದಿಗೂ ಶಾಂತಗೊಳಿಸಲು ಸಾಧ್ಯವಿಲ್ಲ. ಪ್ರಸಿದ್ಧ ಮನುಷ್ಯನಿಗಿಂತ ಉತ್ತಮ ಮನುಷ್ಯನಾಗುವುದು ಸಾವಿರ ಪಟ್ಟು ಉತ್ತಮ ಎಂದಿದ್ದಾರೆ. ಕೌನ್​ ಬನೇಗಾ ಕರೋಡ್​ಪತಿಯ ಸೀಜನ್​ 13 ಶುರುವಾಗುತ್ತಿರುವ ಬೆನ್ನಲ್ಲೇ ಸುಶೀಲ್​ಕುಮಾರ್​ ಅವರ ಈ ಫೇಸ್​ಬುಕ್​ ಬರಹ ಮತ್ತೆ ಹರಿದಾಡಲು ಆರಂಭವಾಗಿದೆ​. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99