ವಾಟ್ಸ್ಆ್ಯಪ್ ನಲ್ಲಿ ಮಹಿಳೆಯರಿಗೆ ಅಶ್ಲೀಲ ಸಂದೇಶ: ಕಾಮುಕನಿಗೆ ಧರ್ಮದೇಟು ನೀಡಿ ತಲೆಬೋಳಿಸಿದ ಗ್ರಾಮಸ್ಥರು
Monday, August 23, 2021
ಚಿಕ್ಕೋಡಿ (ಬೆಳಗಾವಿ): ಮಹಿಳೆಯರ ವಾಟ್ಸ್ಆ್ಯಪ್ ಗೆ ಅಶ್ಲೀಲ ಸಂದೇಶ ಕಳುಹಿಸಿ ವಿಕೃತಿ ಮೆರೆಯುತ್ತಿದ್ದ ಕಾಮುಕನ ತಲೆ ಬೋಳಿಸಿ ಗ್ರಾಮಸ್ಥರು ತಿರುಗೇಟು ನೀಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹೇಶವಾಡಗಿ ಗ್ರಾಮದಲ್ಲಿ ನಡೆದಿದೆ.
ಸುಧಾಕರ್ ಡುಮ್ಮಗೋಳ ಗ್ರಾಮಸ್ಥರಿಂದ ತಲೆ ಬೊಳಿಸಲ್ಪಟ್ಟ ವ್ಯಕ್ತಿ.
ವಾಟ್ಸ್ಆ್ಯಪ್ ಮೂಲಕ ಮಹಿಳೆಯರಿಗೆ ಅಸಹ್ಯವಾಗಿ ಮೆಸೇಜ್ ಮಾಡುತ್ತಿದ್ದ ಸುಧಾಕರ್ ಡುಮ್ಮಗೋಳನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ತನ್ನ ಖಯಾಲಿ ಈತ ಮುಂದುವರೆಸಿದ್ದ. ಈತನಿಗೆ ಬುದ್ಧಿ ಕಲಿಸಬೇಕೇಂದು ಗ್ರಾಮಸ್ಥರೆಲ್ಲರೂ ಸೇರಿ ಧರ್ಮದೇಟು ನೀಡಿ ತಲೆ ಬೋಳಿಸಿ ಪಾಠ ಕಲಿಸಿದ್ದಾರೆ. ಆತನ ತಲೆ ಬೋಳಿಸುವ ವೀಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಘಟನೆಯಿಂದ ತೀವ್ರ ಮುಖಭಂಗವಾದ ಸುಧಾಕರ್ ತಲೆ ಎತ್ತಿ ತಿರುಗಲಾಗದೆ ಇದೀಗ ಊರು ಬಿಟ್ಟು ತಲೆ ಮರೆಸಿಕೊಂಡಿದ್ದಾನೆ.