-->

ಅಶ್ಲೀಲ ವೀಡಿಯೋ ಪ್ರಕರಣದಿಂದ ತಪ್ಪಿಸಿಕೊಳ್ಳಲು ನಟಿಯಿಂದ ಪೊಲೀಸರಿಗೆ 15 ಲಕ್ಷ ರೂ. ಲಂಚ ಆಮಿಷ

ಅಶ್ಲೀಲ ವೀಡಿಯೋ ಪ್ರಕರಣದಿಂದ ತಪ್ಪಿಸಿಕೊಳ್ಳಲು ನಟಿಯಿಂದ ಪೊಲೀಸರಿಗೆ 15 ಲಕ್ಷ ರೂ. ಲಂಚ ಆಮಿಷ

ಮುಂಬೈ: ಅಶ್ಲೀಲ ವೀಡಿಯೋಗಳ ನಿರ್ಮಾಣ, ಆ್ಯಪ್​ಗಳ ಮೂಲಕ ಅಪ್​​ಲೋಡ್​ ಮಾಡುತ್ತಿದ್ದ ಆರೋಪದ ಮೇಲೆ ರಾಜ್​ ಕುಂದ್ರಾ ಬಂಧನವಾಗಿ ಒಂದೊಂದೇ ಸ್ಫೋಟಕ ವಿಚಾರಗಳು ಹೊರಬರುತ್ತಲೇ ಇವೆ. ಇದೀಗ ಮತ್ತೊಂದು ಮಾಹಿತಿ ಮುಂಬೈ ಪೊಲೀಸ್​ ಅಂಗಳದಿಂದ ಹೊರಬಿದ್ದಿದ್ದು, ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನಟಿ, ಮಾಡೆಲ್ ಗೆಹಾನಾ ವಶಿಷ್ಠ ಇದೇ ವರ್ಷದ ಫೆಬ್ರವರಿಯಲ್ಲಿ ಮುಂಬೈನಲ್ಲಿ ಬಂಧನವಾಗಿದ್ದರು. ಆದರೆ ಆಕೆ ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೆ ಭಾರೀ ಆಫರ್​ ನೀಡಿದ್ದರಂತೆ. 

ರಾಜ್​ ಕುಂದ್ರಾ ಬಂಧನದ ಬೆನ್ನಲ್ಲೇ ಗೆಹಾನಾ ವಶಿಷ್ಠ 'ರಾಜ್ ಕುಂದ್ರಾ ನಿರ್ಮಿಸುತ್ತಿದ್ದದು ಪೋರ್ನ್​ ವೀಡಿಯೋ ಅಲ್ಲ, ಎರೋಟಿಕಾ' ಎಂದು ಹೇಳಿ ಸುದ್ದಿಯಾಗಿದ್ದರು. ಅಲ್ಲಿಯವರೆಗೆ ಗೆಹಾನಾ ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತಿರಲಿಲ್ಲ. ಯಾವಾಗ ಬೋಲ್ಡ್​ ಹೇಳಿಕೆ ನೀಡಿದರೋ ಪ್ರಕರಣದಲ್ಲಿ ಆಕೆಯ ಹೆಸರು ಸಹ ಹೆಚ್ಚಾಗಿ ಕೇಳಲಾರಂಭಿಸಿದೆ. 

ಆಕೆ ಪೊಲೀಸರಿಗೆ ಆಮಿಷ ಒಡ್ಡಿರುವ ವಾಟ್ಸ್​ಆ್ಯಪ್​ ಚಾಟ್​ ಒಂದು ಇತ್ತೀಚೆಗಷ್ಟೇ ವೈರಲ್​ ಆಗಿದೆ. ಗೆಹಾನಾ, ತನ್ನನ್ನು ಬಂಧಿಸದಂತೆ ಪೊಲೀಸರಿಗೆ ಬರೋಬ್ಬರಿ 15 ಲಕ್ಷ ರೂ. ಲಂಚದ ಆಮಿಷ ಒಡ್ಡಿದ್ದರಂತೆ. ಆದರೆ, ಆಕೆ ಹೇಳುವ ಪ್ರಕಾರ ಪೊಲೀಸರೇ ನನ್ನ ಬಳಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾಳೆ. ಪ್ರಕರಣದಲ್ಲಿ ಸದ್ಯ ಬಂಧನವಾಗಿರುವ ಯಶ್​ ಠಾಕೂರ್​ ಅಲಿಯಾಸ್​ ಅರವಿಂದ್​ ಕುಮಾರ್​ ಶ್ರೀವಾತ್ಸವ ಮತ್ತು ತನ್ವೀರ್​ ಹಶ್ಮಿ ಜತೆ ಪೊಲೀಸರ ಕುರಿತು ಗೆಹಾನಾ ಚಾಟ್​ ಮಾಡಿರುವ ಸ್ಕ್ರೀನ್​ ಶಾಟ್​ ವೈರಲ್​ ಆಗಿದೆ. ಪ್ರಕರಣದಿಂದ ಹೊರ ಬರಲು ಲಂಚ ನೀಡಲು ಅವರು ಕೂಡ ಸಿದ್ಧರಾಗಿದ್ದರಂತೆ. ಆದರೆ, ಪ್ರಕರಣದಲ್ಲಿ ಸದ್ಯ ಬಂಧನವಾಗಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99