
ಯುವಕನೊಬ್ಬನ ವಾಟ್ಸಪ್ ಸ್ಟೇಟಸ್ ನೋಡಿ ಆತ್ಮಹತ್ಯೆ ಮಾಡಿಕೊಂಡ ಯುವತಿ..ಅಷ್ಟಕ್ಕೂ ಅದರಲ್ಲಿ ಏನಿತ್ತು..??
Monday, July 19, 2021
ಬೆಳಗಾವಿ: ಯುವಕನೊಬ್ಬ ವಿವಾಹಿತೆಯೊಬ್ಬಳನ್ನು ಪ್ರೀತಿಸುವುದಾಗಿ ತನ್ನ ಸ್ಟೇಟಸ್ನಲ್ಲಿ ಬರೆದುಕೊಂಡಿದ್ದು, ಇದರಿಂದ ಹೆದರಿದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿ ನಡೆದಿದೆ.
ಅಕ್ಷತಾ ಪೂಜಾರ್ (24) ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಳು ತಿಂಗಳ ಹಿಂದೆ ಕರಡಿಗುದ್ದಿ ಗ್ರಾಮದ ನಾಗರಾಜ್ ಎಂಬುವರ ಜತೆಗೆ ಅಕ್ಷತಾ ಅವರ ವಿವಾಹವಾಗಿತ್ತು. ಸುತಗಟ್ಟಿ ಗ್ರಾಮದ ಸಂತೋಷ ಎಂಬಾತ ತನ್ನ ವಾಟ್ಸ್ಆ್ಯಪ್ ಸ್ಟೇಟಸ್ಗೆ ಅಕ್ಷತಾರ ಫೋಟೋ ಹಾಕಿ ನಿನ್ನ ಪ್ರೀತಿಸುತ್ತೇನೆ, ನಿನ್ನನ್ನು ಬಿಡುವುದಿಲ್ಲ, ನಿನ್ನ ಹೆಸರು ಬರೆದಿಟ್ಟು ವಿಷ ಕುಡಿದು ಸಾಯುತ್ತೇನೆ’ ಎಂದು ಸ್ಟೇಟಸ್ ಹಾಕಿಕೊಂಡಿದ್ದ. ಜತೆಗೆ ವಿಷವನ್ನೂ ಸೇವಿಸಿದ್ದ. ಆ ಸ್ಟೇಟಸ್ ನೋಡಿ ಯುವತಿ ಪ್ರಾಣ ಕಳೆದುಕೊಂಡಿದ್ದರೆ ಸಂತೋಷ್ ಬದುಕುಳಿದಿದ್ದಾನೆ.