
ಹೊಸ ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಕಾಜಲ್ ಅಗರ್ವಾಲ್...kajal
ನಟಿ ಕಾಜಲ್ ಅಗರ್ವಾಲ್ ಅವರು ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೇ, ಪ್ರತಿ ಸಿನಿಮಾದಲ್ಲಿಯೂ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಇದೀಗ ಅವರು ಸ್ವಾತಂತ್ರಪೂರ್ವದ ಕಥೆಯ ಭಾಗವಾಗುತ್ತಿದ್ದಾರೆ. ಆ ಚಿತ್ರದ ಹೆಸರು ‘ಕರುಂಗಾಪಿಯಂ’. ಇದು ಡಿಕೆ ನಿರ್ದೇಶನದಲ್ಲಿ ಮೂಡಿಬರಲಿರುವ ತಮಿಳು ಚಿತ್ರವಾಗಿದ್ದು, 1940ರ ಕಾಲಘಟ್ಟದ ಜತೆಗೆ ಪ್ರಸ್ತುತತೆ ಬಗ್ಗೆಯೂ ಕಥೆ ಸಾಗಲಿದೆಯಂತೆ.
ಈ ಚಿತ್ರದಲ್ಲಿ ಕಾಜಲ್ ಜತೆಗೆ ರೆಜಿನಾ ಕಸಾಂದ್ರ, ಜನನಿ, ರೈಜಾ ಸಹ ನಟಿಸುತ್ತಿದ್ದು, ಇರಾನಿಯನ್ ನಟಿ ನೋಯ್ರಿಕಾ ಪ್ರಮುಖ ಪಾತ್ರದಲ್ಲಿರಲಿದ್ದಾರೆ. ಸದ್ಯ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಶೀಘ್ರದಲ್ಲಿ ಚಿತ್ರೀಕರಣ ಸಹ ಆರಂಭವಾಗಲಿದೆ.