
ವರ್ಷಗಳ ಬಳಿಕ ವಾಟ್ಸಪ್ ಗ್ರೂಪ್ ನಲ್ಲಿ ಒಂದಾದ ಹೈಸ್ಕೂಲ್ ಲವರ್ಸ್... ಇವ್ರ ಲವ್ವಿಡವ್ವಿಗೆ ಬಲಿಯಾಗಿದ್ದು ಬಡಪಾಯಿ ಜೀವ..!
ವಿಶಾಖಪಟ್ಟಣಂ: ಎನ್ಆರ್ಐ ಸತೀಶ್ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ. ಸತೀಶ್ ಪತ್ನಿ ರಮ್ಯಾ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ರಮ್ಯಾ ಶಾಲಾ ದಿನಗಳಲ್ಲೇ ಭಾಷಾ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗಷ್ಟೇ ಅವರಿಬ್ಬರು ವಾಟ್ಸ್ಆ್ಯಪ್ ಗ್ರೂಪ್ ಮೂಲಕ ಮತ್ತೆ ಒಂದಾಗಿದ್ದರು. ನಂತರ ದೈಹಿಕ ಸಂಪರ್ಕವೂ ಮುಂದುವರಿದಿದೆ. ಇಬ್ಬರು ಓಡಿ ಹೋಗುವ ಸಂಚು ರೂಪಿಸಿದ್ದರು. ಗಂಡನನ್ನು ಕೊಲೆ ಮಾಡಿದರೆ ಪ್ರಿಯಕರನ ಜತೆ ಆರಾಮಾಗಿ ಇರಬಹುದು ಎಂದು ಇಬ್ಬರು ಸೇರಿ ಸತೀಶ್ ಕೊಲೆಗೆ ಸಂಚು ರೂಪಿಸಿ, ಕಳೆದ ವಾರ ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ.
ಸದ್ಯ ಸತೀಶ್ ಪತ್ನಿ ರಮ್ಯಾ ಮತ್ತು ಭಾಷಾನನ್ನು ವಿಶಾಖಪಟ್ಟಣದ ಪೊಲೀಸರು ಬಂಧಿಸಿದ್ದಾರೆ.