![ಅಕ್ಕನ ಜೊತೆಗೆ ಪ್ರೇಮವಿವಾಹ, ತಂಗಿಯ ಅತ್ಯಾಚಾರದ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್, ತಂದೆಗೆ ಪಂಗನಾಮ! - ರಿಯಲ್ ಸ್ಟೋರಿ ಓದಿ.. ಅಕ್ಕನ ಜೊತೆಗೆ ಪ್ರೇಮವಿವಾಹ, ತಂಗಿಯ ಅತ್ಯಾಚಾರದ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್, ತಂದೆಗೆ ಪಂಗನಾಮ! - ರಿಯಲ್ ಸ್ಟೋರಿ ಓದಿ..](https://blogger.googleusercontent.com/img/b/R29vZ2xl/AVvXsEicsxTVJI-GTBMADeXj3M6JCZQ6oDhvkEEF35gc-Pvnee7W7sBEKLzeOGxzdvtAmXmXtTsPqo12_iaSxTg-TzwZT6rFcRWf14nTjVZov1mGXypsxEKnmmr0OwYQ68TmgDaAtjSYEI5tEcX8/s1600/1626693243878633-0.png)
ಅಕ್ಕನ ಜೊತೆಗೆ ಪ್ರೇಮವಿವಾಹ, ತಂಗಿಯ ಅತ್ಯಾಚಾರದ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್, ತಂದೆಗೆ ಪಂಗನಾಮ! - ರಿಯಲ್ ಸ್ಟೋರಿ ಓದಿ..
Monday, July 19, 2021
ಗುಂಟೂರು(ಆಂಧ್ರ ಪ್ರದೇಶ): ವ್ಯಕ್ತಿಯೊಬ್ಬ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಆಕೆಯ ನಗ್ನ ಚಿತ್ರಗಳನ್ನಿಟ್ಟುಕೊಂಡು
ಆಕೆಯ ಅಕ್ಕನ ಜೊತೆ ಪ್ರೇಮ ವಿವಾಹ ಮಾಡಿಕೊಂಡು ಬಂಗಾರವನ್ನು ದೋಚಿ ಇವರ ತಂದೆಗೆ ಕಟ್ಟು ಕಥೆ ಕಟ್ಟಿ ಲಕ್ಷಾಂತರ ರೂಪಾಯಿ ನಗದನ್ನೂ ಲಪಾಟಿಯಿಸಿದ್ದಾನೆ.
ಜೋಶಿಬಾಬು ಎಂಬಾತ ಇಂಜಿನಿಯರಿಂಗ್ ಮಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಡಾಟಾ ಎಂಟ್ರಿ ಕೆಲಸಗಾರನ ವೃತ್ತಿ ಮಾಡುತ್ತಿದ್ದಾನೆ. ಚಿಲಕಲೂರಿ ಪೇಟೆ ನಿವಾಸಿ ಬಾಲಕಿ ರಜೆ ನಿಮಿತ್ತ ತಮ್ಮ ಅಜ್ಜಿ ಮನೆಗೆ ಚೆಬ್ರೋಲು ಗ್ರಾಮಕ್ಕೆ ಬಂದಿದ್ದಾಳೆ. ಈ ವೇಳೆ ಜೋಶಿಬಾಬು ಆಕೆ ಬೆನ್ನಿಗೆ ಬಿದ್ದು ನಂಬರ್ ಕೋಡುವಂತೆ ಪೀಡಿಸಿದ್ದಾನೆ. ಬಾಲಕಿ ನಂಬರ್ ಕೊಡಲು ನಿರಾಕರಿಸಿದಕ್ಕೆ ನಿಮ್ಮ ಅಜ್ಜಿಯನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ ವಿಡಿಯೋ ಕಾಲ್ ಮಾಡಿ ಆಕೆಯೊಂದಿಗೆ ನಗ್ನವಾಗಿ ಮಾತನಾಡಿಸಿದ್ದಾನೆ. ಬಳಿಕ ಹಣ ನೀಡದೇ ಇದ್ದಲ್ಲಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಹೆದರಿಸಿ ಬಾಲಕಿ ಕಡೆಯಿಂದ ಬಂಗಾರದ ಸರ ದೋಚಿದ್ದಾನೆ.
ನಂತರ ಬಾಲಕಿ ತಂದೆಗೆ ಕರೆ ಮಾಡಿ ನಿಮ್ಮ ಮಗಳ ನಗ್ನ ವಿಡಿಯೋ ಮತ್ತು ಫೋಟೊಗಳು ಬೇರೆಯವರ ಬಳಿ ಇರುವುದನ್ನು ನಾನು ನೋಡಿದ್ದೇನೆ. ಅವನ್ನು ತೆಗೆದು ಹಾಕಲು 3.30 ಲಕ್ಷ ರೂ. ಖರ್ಚಾಗುತ್ತೆ ಎಂದು ಹೇಳಿ ಹಣ ದೋಚಿದ್ದಾನೆ. ಬಾಲಕಿ ಅಕ್ಕನೊಂದಿಗೆ ಕೂಡ ನಿಮ್ಮ ಸಹೋದರಿಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಿಸ್ತೀನಿ ಎಂದು ಹೇಳಿ ಆಕೆ ಬಳಿಯಿದ್ದ ಬಂಗಾರದ ಸರ ಸಹ ದೋಚಿದ್ದಾನೆ. ನಂತರ ಆಕೆಯೊಂದಿಗೆ ಪ್ರೇಮ ಪುರಾಣ ಆರಂಭಿಸಿದ್ದಾನೆ. ಇಬ್ಬರೂ ರಹಸ್ಯವಾಗಿ ಮದುವೆ ಸಹ ಆಗಿದ್ದಾರೆ.
ಜೋಶಿಬಾಬು ಮೇಲೆ ಕುಟುಂಬಸ್ಥರಿಗೆ ಅನುಮಾನ ಮೂಡಿ ಜೋಶಿಬಾಬು ಮೇಲೆ ದೂರು ದಾಖಲಿಸಿದ್ದಾರೆ. ಈ ಘಟನೆ ಕುರಿತು ತನಿಖೆ ಮುಂದುವರಿದಿದೆ.