ಪ್ರಿಯಾಂಕ ಬರ್ತಡೆಗೆ ಪತಿ ನಿಕ್ ಕೊಟ್ಟ ದುಬಾರಿ ಗಿಫ್ಟ್ ಏನು ಗೊತ್ತಾ..?
Monday, July 19, 2021
ಲಂಡನ್: ಜುಲೈ 18ರಂದು ನಟಿ ಪ್ರಿಯಾಂಕಾ ಚೋಪ್ರಾ ತಮ್ಮ 39ನೇ ವರ್ಷದ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೊನಸ್ ಹೆಂಡತಿಗಾಗಿ ಅಮೆರಿಕದಿಂದ ಲಂಡನ್ಗೆ ವಿಶೇಷ ಗಿಫ್ಟ್ ಒಂದನ್ನು ಕಳುಹಿಸಿಕೊಟ್ಟಿದ್ದು, ಆ ಗಿಫ್ಟ್ ಕಂಡ ಪ್ರಿಯಾಂಕಾ ಚೋಪ್ರಾ ಸಂತೋಷದಿಂದ ಕುಣಿದಾಡಿದ್ದಾರಂತೆ.
ಲಂಡನ್ನಲ್ಲಿರುವ ಪ್ರಿಯಾಂಕಾಗೆ ಆಕೆಯ ಪತಿ ಅಮೆರಿಕದಿಂದ 1982 ಚಟೌ ಮೌಟನ್ ರೋಥ್‌ಚೈಲ್ಡ್ ರೆಡ್ ವೈನ್ ಬಾಟೆಲ್ನ್ನು ಕಳುಹಿಸಿಕೊಟ್ಟಿದ್ದಾರೆ.
ಈ ವೈನ್ ಅತ್ಯಂತ ದುಬಾರಿ ವೈನ್ ಕೇವಲ 750 ಮಿಲೀ ವೈನ್ಗೆ ಸರಿಸುಮಾರು 1.31 ಲಕ್ಷ ರೂಪಾಯಿ ಬೆಲೆಯಂತೆ!
ಗಂಡ ಕಳುಹಿಸಿಕೊಟ್ಟಿರುವ ವೈನ್ ಬಾಟಲ್ನ ಫೋಟೋವನ್ನು ನಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬೇರೆಲ್ಲ ಗಿಫ್ಟ್ಗಳಿಗಿಂತ ನನಗೆ ಈ ಗಿಫ್ಟ್ ಅತ್ಯಂತ ಸ್ಪೆಷಲ್ ಎಂದು ಹೇಳಿಕೊಂಡಿದ್ದಾರೆ.