ಪ್ರಿಯಾಂಕಾಗೆ ಅಶ್ಲೀಲ ಸನ್ನೆ ಮಾಡಿದ ಚಕ್ರವರ್ತಿ..ಬಿಗ್ ಬಾಸ್ ಕೊಡುವ ಶಿಕ್ಷೆ ಎಂತದ್ದು..?
Monday, July 19, 2021
ಬೆಂಗಳೂರು: ಬಿಗ್ಬಾಸ್ ಸೀಸನ್ 8ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಪ್ರಿಯಾಂಕಾ ತಿಮ್ಮೇಶ್ ನಿನ್ನೆ ಮನೆಯಿಂದ ಹೊರಬಂದಿದ್ದಾರೆ.
ಮನೆಯೊಳಗೆ ಆಕೆಯ ದುಶ್ಮನ್ ಆಗಿದ್ದ ಚಂದ್ರಚೂಡ್ ಮಾಡಿದ ಒಂದು ಕೆಲಸಕ್ಕೆ ಇದೀಗ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ನಿನ್ನೆ ಪ್ರಿಯಾಂಕಾ ಎಲಿಮಿನೇಟ್ ಆಗಿ ಮನೆಯಿಂದ ಹೊರಬರುವ ವೇಳೆ ಆಕೆಗೆ ವಿಶೇಷ ಅಧಿಕಾರವೊಂದನ್ನು ನೀಡಲಾಯಿತು. ಮುಂದಿನ ವಾರಕ್ಕೆ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಿ ಎಂದು ಹೇಳಲಾಯಿತು. ಆಗ ಪ್ರಿಯಾಂಕಾ, ಚಕ್ರವರ್ತಿ ಹೆಸರನ್ನು ತೆಗೆದುಕೊಂಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಚಕ್ರವರ್ತಿ, ಪ್ರಿಯಾಂಕಾಗೆ ಅಶ್ಲೀಲ ಸನ್ನೆ ಮಾಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದೆ. ಬಿಗ್ಬಾಸ್ನ ಗೂಂಡಾ ಎಂದು ಚಕ್ರವರ್ತಿಯನ್ನು ಕರೆಯಲಾಗುತ್ತಿದೆ. ಅವರನ್ನು ಮೊದಲು ಎಲಿಮಿನೇಟ್ ಮಾಡಬೇಕು ಎನ್ನಲಾಗುತ್ತಿದೆ.