Video, ಒಲಿಂಪಿಕ್ ಕಿಟ್ ನಲ್ಲಿ ಸಾನಿಯಾ ಮಿರ್ಜಾ ಡಾನ್ಸ್ ವಿಡಿಯೋ ವೈರಲ್...
Friday, July 16, 2021
ಒಲಿಂಪಿಕ್ನಲ್ಲಿ ಭಾಗವಹಿಸುವುದಕ್ಕು ಮುನ್ನ ಕ್ರೀಡಾಪಟುಗಳು ತಮ್ಮ ವಿಶೇಷ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಭಾರತದ ಹೆಮ್ಮೆಯ ಟೆನ್ನಿಸ್ ಆಟಗಾರ್ತಿ ಸಾನಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರತದ ಹೊಸ ಒಲಿಂಪಿಕ್ ಜೆರ್ಸಿಯಲ್ಲಿ ಡ್ಯಾನ್ಸ್ ಮಾಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಸಾನಿಯಾ ಮಿರ್ಜಾ ಅವರ ಫೋಸ್ಟ್ ವೈರಲ್ ಆಗಿದ್ದು ಶೇರ್ ಮಾಡಿಕೊಂಡ 2 ಗಂಟೆಗಳಲ್ಲಿ 55 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಜುಲೈ 23ರಿಂದ ಆಗಸ್ಟ್ 8ರ ವರೆಗೆ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ಗಾಗಿ ಭಾರತದಲ್ಲಿ 18 ಕ್ರೀಡಾ ವಿಭಾಗಗಳಿಂದ ಒಟ್ಟು 126 ಕ್ರೀಡಾಪಟುಗಳು ತೆರಳಲಿದ್ದಾರೆ.
ಭಾರತ ಇದೇ ಮೊದಲ ಬಾರಿಗೆ ಫೆನ್ಸರ್ ಕ್ರೀಡೆಯಲ್ಲಿ ಸ್ಪರ್ಧಿಸುತ್ತಿದೆ. ಭಾರತದ ಭವಾನಿ ದೇವಿ ಫೆನ್ಸರ್ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಸೈಲರ್ ವಿಭಾಗದಲ್ಲಿ ನೇತ್ರಾ ಕುಮಾರ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳೆ ಆಗಿದ್ದಾರೆ. ಇನ್ನು ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಈಜುಗಾರರಾದ ಸಜನ್ ಪ್ರಕಾಶ್ ಮತ್ತು ಶ್ರೀಹರಿ ನಟರಾಜ್ ಕೂಡ ಈ ಬಾರಿಯ ಒಲಿಂಪಿಕ್ಸ್ ಕೂಟದ ವಿಶೇಷತೆ ಹಾಗೂ ಹೆಗ್ಗಳಿಕೆಯಾಗಿದೆ.