ಬೆವರು ಬಾರದೆಂದು ಆಪರೇಷನ್ ಮಾಡಿಸಿಕೊಂಡ ಯುವತಿ.. ಮುಂದೆ ಆಕೆಗಾದ ಪರಿಸ್ಥಿತಿ ಇಲ್ಲಿದೆ ನೋಡಿ..
Friday, July 16, 2021
ಮೆಕ್ಸಿಕೋ: ಬೆವರೇ ಬರಬಾರದು ಎಂದು ಆಪರೇಶನ್ ಮಾಡಿಸಿಕೊಂಡು ಯುವತಿಯೊಬ್ಬಳ ಪರಿಸ್ಥಿತಿ ಕೇಳಿದರೆ ನೀವು ಗಾಬರಿಯಾಗುತ್ತೀರ.
ಮೆಕ್ಸಿಕೋದ ಒಡಾಲಿಸ್ ಸ್ಯಾಂಟೋಸ್ ಮೆನಾ(23) ಮಾಡೆಲ್ ಆಗಿ, ಬಾಡಿ ಬಿಲ್ಡರ್ ಆಗಿ ಗುರುತಿಸಿಕೊಂಡಾಕೆ. ಸಾಕಷ್ಟು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದ ಈಕೆಗೆ ಸೋಶಿಯಲ್ ಮೀಡಿಯಾದಲ್ಲೂ ಲಕ್ಷಾಂತರ ಹಿಂಬಾಲಕರಿದ್ದರು. ಒಂದು ಸ್ಕಿನ್ ಕೇರ್ ಕ್ಲಿನಿಕ್ ಈಕೆಯನ್ನೇ ಬ್ರ್ಯಾಂಡ್ ರೀತಿಯಲ್ಲಿ ತೆಗೆದುಕೊಂಡು ಒಡಾಲಿಸ್ಗೆ ಬೆವರು ಬಾರದಿರುವಂತೆ ಆಪರೇಷನ್ ಮಾಡಿದೆ. ಇನ್ನು ಮುಂದೆ ಎಷ್ಟೇ ಕಸರತ್ತು ಮಾಡಿದರೂ ಬೆವರು ಬರುವುದಿಲ್ಲ, ಬೆವರಿನ ಕೆಟ್ಟ ವಾಸನೆಯಿಂದ ಮುಕ್ತಿ ಸಿಗುತ್ತದೆ ಎನ್ನುವ ಖುಷಿಯಿಂದ ಆಕೆ ಕೂಡ ಆಪರೇಷನ್ ಮಾಡಿಸಿಕೊಂಡಿದ್ದಾಳೆ.
ಆದರೆ ಆಕೆಯ ದೇಹಕ್ಕೆ ಆಪರೇಷನ್ನಿಂದ ಕೆಲವು ದುಷ್ಪರಿಣಾಮ ಉಂಟಾಗಿದೆ. ಸಾವಿರಾರು ಕನಸು ಕಂಡಿದ್ದ ಯುವತಿ 23ನೇ ವಯಸ್ಸಿಗೇ ಕಾರ್ಡಿಯಾಕ್ ಅಟ್ಯಾಕ್ಗೆ ಸಿಲುಕಿದ್ದಾಳೆ. ಆಕೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ.