ಯುವತಿ ಕಂಠಸಿರಿಗೆ ಮರುಳಾದ ಉಪನ್ಯಾಸಕ ಹನಿಟ್ರ್ಯಾಪ್‌ನಲ್ಲಿ ಬಂಧಿ.. ಆಕೆ ಹೇಗೆಲ್ಲಾ ನವರಂಗಿ ಆಟ ಆಡ್ತಿದ್ಲು ಗೊತ್ತಾ..?
Friday, July 16, 2021
ಹುಬ್ಬಳ್ಳಿ: ತನ್ನ ಕಂಠಸಿರಿಯಿಂದಲೇ ಕಾಲೇಜ್ ಉಪನ್ಯಾಸಕರನ್ನು ತನ್ನ ಬಲೆಗೆ ಬೀಳಿಸಿ ಹನಿಟ್ರ್ಯಾಪ್ ಮಾಡಲು ಹೋಗಿ ಈಗ ಆಕೆ ಮತ್ತು ಆಕೆಯ ತಂಡ ಜೈಲು ಸೇರಿದ್ದಾರೆ.
ಈಕೆಯ ಹೆಸರು ಅನಘ ವಡವಿ. ಈಕೆ ಧಾರವಾಡದ ಹಾಡುಗಾರ್ತಿ.ಹುಬ್ಬಳ್ಳಿಯ ಕಾಲೇಜಿನಲ್ಲಿ ಹಾಡಲು ಹೋಗಿದ್ದ ಈಕೆ ಅದೇ ಕಾಲೇಜಿನ ಉಪನ್ಯಾಸಕನಿಗೆ ಬಲೆ ಬೀಸಿದ್ದಾಳೆ. ನಂತರ ಇವರಿಬ್ಬರೂ ತುಂಬಾ ಕ್ಲೋಸ್ ಆಗಿದ್ದರು.ಯುವತಿ ಉಪನ್ಯಾಸಕನಿಂದ ಹಲವು ಬಾರಿ ಹಣ ಕಿತ್ತುಕೊಂಡಿದ್ದಳು. ನಂತರ ಆತನನ್ನು ಹನಿಟ್ರ್ಯಾಪ್ ಮಾಡಲು ಹೋಗಿ ಈಗ ಜೈಲು ಸೇರಿದ್ದಾಳೆ.
2017ರಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣದಲ್ಲಿ ಹುಬ್ಬಳ್ಳಿಯ 5ನೇ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿ ಅನಘ ವಡವಿಗೆ ಶಿಕ್ಷೆ ನೀಡಿ ಜೈಲಿಗೆ ಕಳುಹಿಸಿದೆ.ಮೂವರು ಯುವಕರ ಜೊತೆ ಸೇರಿಕೊಂಡು ಅಂದು ಮಾಸ್ಟರ್ ಪ್ಲಾನ್ ಮಾಡಿದ ಅನಘ ವಡವಿ, ಉಪನ್ಯಾಸಕರೊಬ್ಬರನ್ನು ಕಾರವಾರ ರಸ್ತೆಗೆ ಕರೆದುಕೊಂಡು ಸ್ವಲ್ಪ ಹೊತ್ತು ಕ್ಲೋಸ್ ಆಗಿ ಮೂವ್ ಮಾಡಿದ್ದಾಳೆ. ಬಳಿಕ ತನ್ನ ಆಟ ಶುರು ಮಾಡಿದ್ದಾಳೆ. ಜೊತೆಗೆ ಉಪನ್ಯಾಸಕನ ವಿರುದ್ಧ ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದಾಳೆ. ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದಾಳೆ. ಆದ್ರೆ ಇದ್ಯಾವುದಕ್ಕೂ ಆತ ಒಪ್ಪದಿದ್ದಾಗ ಉಪನ್ಯಾಸಕನ ಮೇಲೆ ಹಲ್ಲೆ ಮಾಡಿ ಹಣದೋಚಿಕೊಂಡು ಪರಾರಿಯಾಗಿದ್ದಾರೆ.
ಈ ಬಗ್ಗೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹನಿಟ್ರ್ಯಾಪ್ ಪ್ರಕರಣದ ವಿಚಾರಣೆ ನಡೆಸಿದ ಐದನೇ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿಗಳಾದ ಅನಘ ವಡವಿ, ಗಣೇಶ್ ಶೆಟ್ಟಿ, ರಮೇಶ್ ಹಜಾರೆ, ವಿನಾಯಕ ಹಜಾರೆಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ದಂಡ ವಿಧಿಸಿ ಆದೇಶಿಸಿದೆ.