ಬಾಲಿವುಡ್ ನಟಿ ಸೋನಂ ಕಪೂರ್ ಗರ್ಭಿಣಿಯಾಗಿದ್ದಾರ?
Friday, July 16, 2021
ಬಾಲಿವುಡ್ ನಟಿ ಸೋನಂ ಕಪೂರ್ ಅಹುಜಾ ಮುಂಬೈಗೆ ಬಂದಿಳಿದಿದ್ದಾರೆ.2018ರಲ್ಲಿ ಉದ್ಯಮಿ ಆನಂದ್ ಅಹುಜಾ ಜೊತೆಗೆ ಸೋನಂ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಕಳೆದ ಒಂದು ವರ್ಷದಿಂದ ಪತಿ ಆನಂದ್ ಅಹುಜಾ ಜೊತೆಗೆ ಲಂಡನ್‌ನಲ್ಲಿದ್ದ ಸೋನಂ ಕಪೂರ್ ಇದೀಗ ತಮ್ಮ ತವರಿಗೆ ಬಂದಿದ್ದಾರೆ.
ಲಂಡನ್‌ನಿಂದ ಬಂದಿದ್ದ ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ತಂದೆ ಅನಿಲ್ ಕಪೂರ್ ಏರ್‌ಪೋರ್ಟ್‌ಗೆ ಬಂದಿದ್ದರು. ನಟಿ ಸೋನಂ ಕಪೂರ್ ಧರಿಸಿದ್ದ ಉಡುಪು ಪ್ರೆಗ್ನೆನ್ಸಿ ಗಾಸಿಪ್‌ಗೆ ಕಾರಣವಾಗಿದೆ.ಸೋನಂ ಕಪೂರ್ ಅವರ ಉಡುಪು ಮತ್ತು ನಡೆಯುತ್ತಿದ್ದ ಶೈಲಿ ನೋಡಿ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ. ''ಸೋನಂ ಕಪೂರ್ ಗರ್ಭಿಣಿಯಾಗಿದ್ದಾರಾ?'', ''ಸೋನಂ ಕಪೂರ್ ಅವರ ಬೇಬಿ ಬಂಪ್ ಕಾಣುತ್ತಿದೆ'', ''ಸೋನಂ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ?'' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.