ಇನ್ನೂ ಕೇರಳದಿಂದ ರೈಲಿನಲ್ಲಿ ಬಂದರೂ ಕೊರೊನಾ ನೆಗೆಟಿವ್/ ಲಸಿಕೆ ಸರ್ಟಿಫಿಕೇಟ್ ತೋರಿಸೋದು ಕಡ್ಡಾಯ... ಇಲ್ಲದಿದ್ದರೆ... (Video)
Wednesday, July 14, 2021
ಮಂಗಳೂರು : ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣ ಮತ್ತು ಝಿಕಾ ವೈರಸ್ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಗಡಿ ಭಾಗದ ತಪಾಸಣೆ ಬಿಗಿಗೊಳಿಸಲಾಗಿದೆ. ಈವರೆಗೆ ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಮಾತ್ರ ಇದ್ದ ತಪಾಸಣೆ ಯನ್ನು ರೈಲ್ವೆನಿಲ್ದಾಣದಲ್ಲೂ ಆರಂಭಿಸಲಾಗಿದೆ.
ಕೇರಳದಿಂದ ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಬರುವ ಪ್ರಯಾಣಿಕರು ಆರ್ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೆಟ್ ಅಥವಾ ಕೊರೊನಾ ಲಸಿಕೆಯ ಸರ್ಟಿಫಿಕೆಟ್ ಅನ್ನು ರೈಲ್ವೆ ನಿಲ್ದಾಣದ ಚೆಕ್ ಪೋಸ್ಟ್ನಲ್ಲಿ ತೋರಿಸಬೇಕಾಗುತ್ತದೆ. ಇಲ್ಲದೆ ಇರುವವರಿಗೆ ಸ್ಥಳದಲ್ಲಿ RTPCR ಪರೀಕ್ಷೆ ವ್ಯವಸ್ಥೆ ಮಾಡಲಾಗಿದೆ.
ಮಂಗಳೂರಿನ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ಮತ್ತು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಚೆಕ್ ಪೋಸ್ಟ್ ತೆರೆದು ತಪಾಸಣೆ ನಡೆಸಲಾಗುತ್ತಿದೆ.