-->

ಪಿಎಸ್​ಐ ಆಗಿರುವ ತಾಯಿ ವಿರುದ್ಧವೇ ಎಸ್ ಪಿ ಗೆ ದೂರು ಕೊಟ್ಟ ಮಗಳು.. ಕಾರಣವೇನು ಗೊತ್ತಾ..??

ಪಿಎಸ್​ಐ ಆಗಿರುವ ತಾಯಿ ವಿರುದ್ಧವೇ ಎಸ್ ಪಿ ಗೆ ದೂರು ಕೊಟ್ಟ ಮಗಳು.. ಕಾರಣವೇನು ಗೊತ್ತಾ..??

 ಗದಗ​: ಮಹಿಳಾ ಪೊಲೀಸ್​ ಸಬ್ ​ಇನ್​ಸ್ಪೆಕ್ಟರ್​ ಮಗಳೊಬ್ಬಳು ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗಿ ಮದುವೆ ಮಾಡಿಕೊಂಡಿದ್ದು, ನಮಗೆ ರಕ್ಷಣೆ ಕೊಡಿ ಎಂದು ತಾಯಿ ವಿರುದ್ಧವೇ ಯುವತಿ ಎಸ್​ಪಿಗೆ ದೂರು ಕೊಟ್ಟಿದ್ದಾಳೆ.

ರಾಜೀವ್ ಗಾಂಧಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರೇಣುಕಾ ಮುಂಡೆವಾಡಗಿ ಮತ್ತು ಅಗ್ನಿಶಾಮಕ ಇಲಾಖೆಯ ಹವಾಲ್ದಾರ್ ರಮೇಶ್ ದಂಪತಿಯ ಏಕೈಕ ಮಗಳು ಮೇಘಾ.ಕರೊನಾ ಲಾಕ್​ಡೌನ್​ ವೇಳೆ ಮೇಘಾಳಿಗೆ ಮದುವೆ ಮಾಡಲು ಪೋಷಕರು ಬೇರೆ ಕಡೆ ಸಂಬಂಧ ನೋಡುತ್ತಿದ್ದರಂತೆ. ಇದನ್ನರಿತ ಮೇಘಾ ಮನೆ ಬಿಟ್ಟು  ಹೋಗಿ ಪ್ರಿಯಕರ ಕೀರ್ತನಾಥ ಎಂಬಾತನೊಂದಿಗೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದಾಳೆ.

 ನಾವಿಬ್ಬರೂ 7 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ನಮ್ಮಿಬ್ಬರ ಮದುವೆಗೆ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಹಾಗಾಗಿ ನಾವು ಬೇರೆಡೆ ಹೋಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ. ಪಿಎಸ್​ಐ ಆಗಿರುವ ನನ್ನ ತಾಯಿಯೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಅವರು ನಮ್ಮನ್ನು ಬದುಕಲು ಬಿಡಲ್ಲ. ನಮಗೆ ರಕ್ಷಣೆ ಕೊಡಿ ಎಂದು ತಾಯಿ ವಿರುದ್ಧವೇ ಯುವತಿ ಎಸ್​ಪಿಗೆ ದೂರು ಕೊಟ್ಟಿದ್ದಾಳೆ.  ಪ್ರೇಮಿಗಳಿಗೆ ರಕ್ಷಣೆ ನೀಡುವುದಾಗಿ ಎಸ್​ಪಿ ಭರವಸೆ ನೀಡಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99