ಟೋಕಿಯೊ ಒಲಂಪಿಕ್ಸ್ ಆಯ್ಕೆ ಸ್ಪರ್ಧೆಯಲ್ಲಿ ಭಾಗವಹಿಸಿದ 18 ವಾರದ ಗರ್ಭಿಣಿ..!!
Wednesday, July 14, 2021
ನ್ಯೂಯಾರ್ಕ್: 18 ವಾರದ ಗರ್ಭಿಣಿ ಅಮೆರಿಕದ ಒಲಿಂಪಿಕ್ಸ್ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದಾರೆ.
31 ವರ್ಷದ ಲಿಂಡ್‌ಸೇ ಪ್ಲಾಚ್ ಹೆಪ್ಟಾಥ್ಲಾನ್‌ನ 100 ಮೀಟರ್ ಹರ್ಡಲ್ಸ್, ಹೈಜಂಪ್, ಶಾಟ್ ಪುಟ್, 200 ಮೀಟರ್ ಓಟ, ಲಾಂಗ್ ಜಂಪ್ ಮತ್ತು ಜಾವೆಲಿನ್ ಎಸೆತಗಳಲ್ಲಿ ಪಾಲ್ಗೊಂಡು ಎಲ್ಲರ ಹುಬ್ಬೇರಿಸಿದ್ದಾರೆ.
ಗರ್ಭಿಣಿಯಾಗಿರುವ ಅವರು ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ವೈದ್ಯರಿಂದ ಅನುಮತಿ ಪಡೆದುಕೊಂಡಿದ್ದೇನೆ.
ಒಲಿಂಪಿಕ್ಸ್‌ನಲ್ಲಿ ಪ್ರತಿ ಕ್ರೀಡಾಪಟುವಿನ ಕನಸು. ತಾಯಂದಿರು ಎಷ್ಟು ಬಲಿಷ್ಠವಾಗಿರುತ್ತಾರೆ ಎಂದು ತೋರಿಸುವ ಜತೆಗೆ, ತಮ್ಮ ಕ್ರೀಡಾ ಜೀವನವನ್ನು ತಾವಾಗಿಯೇ ಕೊನೆಗೊಳಿಸಬೇಕು, ಬೇರೆ ಯಾರ ಒತ್ತಡದಿಂದಲೂ ಅದು ಕೊನೆಗೊಳ್ಳಬಾರದು ಎಂಬ ಉದ್ದೇಶದಿಂದಲೂ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾಗಿ ಹೇಳಿಕೊಂಡಿದ್ದಾರೆ.