ಪಾಕಿಸ್ತಾನದಲ್ಲಿ 2 ಜರ್ಮನ್ ಶಫರ್ಡ್ ನಾಯಿಗಳಿಗೆ ಮರಣದಂದನೆ ಶಿಕ್ಷೆ- ಕಾರಣವೇನು ಗೊತ್ತಾ? (Video)
Wednesday, July 14, 2021
ಕರಾಚಿ: ವಕೀಲರೊಬ್ಬರ ಮೇಲೆ ದಾಳಿ ಮಾಡಿದ ಜರ್ಮನ್ ಶಫರ್ಡ್ ತಳಿಯ ಎರಡು ನಾಯಿಗಳಿಗೆ ಸಾವಿನ ಶಿಕ್ಷೆ ವಿಧಿಸಲಾಗಿದೆ. ಈ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.
ಕರಾಚಿ ಇಲ್ಲಿನ ಪ್ರತಿಷ್ಠಿತ ಡಿಫೆನ್ಸ್ ಹೌಸಿಂಗ್ ಸೊಸೈಟಿ ಆವರಣದಲ್ಲಿ ಮುಂಜಾನೆ ವೇಳೆ ವಾಕಿಂಗ್ ಮಾಡುತ್ತಿದ್ದ ಹಿರಿಯ ವಕೀಲ ಮಿರ್ಜಾ ಅಖ್ತರ್ ಅಲಿ ಮೇಲೆ ದಾಳಿ ಮಾಡಿದ ಎರಡು ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು. ದಾಳಿಯಿಂದಾಗಿ ವಕೀಲ ಗಂಭೀರ ಗಾಯಗೊಂಡಿದ್ದರು. ನಾಯಿ ದಾಳಿ ಮಾಡುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಮಾಲೀಕನೊಂದಿಗೆ ಮಾತನಾಡಿದ ವಕೀಲರು ನಾಯಿಗಳಿಗೆ ಮರಣದಂಡಣೆ ಕೊಟ್ಟಿದ್ದಾರೆ. ದಾಳಿ ಮಾಡಿದ ಎರಡೂ ನಾಯಿಗಳನ್ನು ಈಗಾಗಲೇ ಕೊಲ್ಲಲಾಗಿದೆ.
ಅಲ್ಲದೆ, ಇನ್ಮುಂದೆ ಮಾಲೀಕ ನಾಯಿಗಳನ್ನು ಸಾಕುವಂತಿಲ್ಲ. ಇದೆಲ್ಲವೂ ನ್ಯಾಯಾಲಯದ ಹೊರಗೆ ನಡೆದಿರುವ ಕೃತ್ಯ.
Violent #Dogattack in #DHA Phase 7, Street number 14. #Karachi.#Pakistan pic.twitter.com/TxFhq6TiQL
— Asad Zaman 🇵🇰 (@asadweb) June 27, 2021