ಕಾರಿನ ಬಾನೆಟ್ ಏರಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ವಧುವಿಗೆ ಆಗಿದ್ದೇನು ಗೊತ್ತಾ.?
Wednesday, July 14, 2021
ಪುಣೆ: ವಧು ಮದುವೆ ಮಂಟಪಕ್ಕೆ ಎಸ್ ಯುವಿ ಕಾರಿನ ಬಾನೆಟ್ ಮೇಲೆ ಕುಳಿತು ಆಗಮಿಸಿದ್ದು, ವಧು ಕಾರಿನ ಮೇಲೆ ಬರುವ ವಿಡಿಯೋ ವೈರಲ್ ಆದ ಬಳಿಕ ಪುಣೆ ಪೊಲೀಸರು ವಧುವಿನ ವಿರುದ್ಧ ಯಪ್ರಕರಣ ದಾಖಲಿಸಿದ್ದಾರೆ.
23 ವರ್ಷದ ವಧು ಅದ್ಧೂರಿಯಾಗಿ ಮದುವೆ ಮಂಟಪಕ್ಕೆ ಬಂದಿದ್ದಾರೆ. ಮನೆಯಿಂದ ಎಸ್ ಯುವಿ ಕಾರಿನ ಬಾನೆಟ್ ಮೇಲೆ ಕುಳಿತು ಕಲ್ಯಾಣ ಮಂಟಪಕ್ಕೆ ಆಗಮಿಸಿದರು. ಅದನ್ನು ವಿಡಿಯೋಗ್ರಾಫರ್ ಬೈಕ್ ಮೇಲೆ ಕುಳಿತು ಚಿತ್ರೀಕರಿಸಿದ್ದಾರೆ. ವಧು ಕಾರಿನ ಮೇಲೆ ಬರುವ ವಿಡಿಯೋ ವೈರಲ್ ಆದ ಬಳಿಕ ಪುಣೆ ಪೊಲೀಸರು ವಧುವಿನ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದು, ನೋಟಿಸ್ ಕಳುಹಿಸಿದ್ದಾರೆ.
ವಧು ಮಾತ್ರವಲ್ಲದೆ, ವಿಡಿಯೋಗ್ರಾಫರ್ , ಮತ್ತು ಕಾರು ಚಾಲಕನ ಮೇಲೆ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಕೇಸು ದಾಖಲಾಗಿದೆ. ಮದುವೆ ಆಗಿರಲಿ ಅಥವಾ ಯಾವುದೇ ಸಮಾರಂಭವಾಗಿರಲಿ ಯಾರು ಕೂಡ ಸಂಚಾರ ನಿಯಮ ಉಲ್ಲಂಘಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.