ರಾಜ್ ಕುಂದ್ರಾ ಬಂಧನದ ಬೆನ್ನಲ್ಲೇ ಟ್ವಿಟ್ಟರ್ನಲ್ಲಿ ಮಹತ್ವದ ಮಾಹಿತಿ ಹರಿಯಬಿಟ್ಟ ನಟಿ ಶೆರ್ಲಿನ್ ಚೋಪ್ರಾ..!!
Saturday, July 24, 2021
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗಂಡ ರಾಜ್ ಕುಂದ್ರಾ ಅವರನ್ನು ಮಹಾರಾಷ್ಟ್ರ ಸೈಬರ್ ಕ್ರೈಂ ಪೊಲೀಸರು ತೀವ್ರವಾಗಿ ವಿಚಾರಣೆಗೊಳಪಡಿಸಿದ್ದಾರೆ.
ಈ ಬೆನ್ನಲ್ಲೇ ನಟಿ ಶೆರ್ಲಿನ್ ಚೋಪ್ರಾ ಟ್ವಿಟರ್ನಲ್ಲಿ ಮಹತ್ವದ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ.
ನನ್ನನ್ನು ವಯಸ್ಕ ಚಲನಚಿತ್ರೋದ್ಯಮಕ್ಕೆ ಕರೆತರುವಲ್ಲಿ ರಾಜ್ ಕುಂದ್ರಾ ಅವರ ಕೈವಾಡವಿದೆ. ಪೂನಂ ಪಾಂಡೆ ಜೊತೆ ಕೂಡ ಅವರು ಒಪ್ಪಂದ ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ. ರಾಜ್ ಕುಂದ್ರಾ ಅವರ ಅನೇಕ ಪ್ರಾಜೆಕ್ಟ್ಗಳೊಂದಿಗೆ ನಾನು ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ನನಗೆ ಕೆಲ ಪತ್ರಕರ್ತರು ನನಗೆ ಮೇಲಿಂದ ಮೇಲೆ ಫೋನ್ ಮಾಡ್ತಿದ್ದು, ರಾಜ್ ಕುಂದ್ರಾ ವಿಚಾರವಾಗಿ ಪ್ರಶ್ನೆ ಮಾಡ್ತಿದ್ದಾರೆ. ಅವರೆಲ್ಲರಿಗೂ ನಾನು ತಿಳಿಸುವುದು ಇಷ್ಟೇ. ಒಂದು ವೇಳೆ ಮಹಾರಾಷ್ಟ್ರ ಸೈಬರ್ ಕ್ರೈಂನಿಂದ ನನಗೆ ನೋಟಿಸ್ ಬಂದರೆ ಅವರ ವಿರುದ್ಧವಾಗಿ ಹೇಳಿಕೆ ನೀಡುವ ಮೊದಲ ಮಹಿಳೆ ನಾನು ಎಂದಿದ್ದಾರೆ. 2021ರ ಮಾರ್ಚ್ ತಿಂಗಳಲ್ಲಿ ನಾನು ಇದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಹೇಳಿಕೆ ಸಹ ದಾಖಲು ಮಾಡಿದ್ದೇನೆ ಎಂದು ನಟಿ ತಿಳಿಸಿದ್ದಾರೆ