ಮಹಿಳೆಯರನ್ನು ಟಾರ್ಗೆಟ್ ಮಾಡಿ ಬೆತ್ತಲೆ ಚಿತ್ರ ತರಿಸಿಕೊಂಡು ಬ್ಲಾಕ್ ಮೇಲ್ ... ಏನಿದು ಘಟನೆ??
Friday, July 23, 2021
ಈತ ಆರ್ಥಿಕ ಸಮಸ್ಯೆ ಇರುವ ಮಹಿಳೆಯರನ್ನು ತನ್ನ ಕಾಮದಾಹಕ್ಕೆ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಇಂಡೋನೇಷಿಯಾದ ಮಹಿಳೆಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ದೆಹಲಿ ನಿವಾಸಿ, 21 ವರ್ಷ ವಯಸ್ಸಿನ ಆರೋಪಿ ಜತಿನ್ ಭರದ್ವಾಜ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಮಾನಸಿಕ ಸಮಸ್ಯೆಯುಳ್ಳವರಿಗೆ ಬೆಂಬಲ ಒದಗಿಸುವ ವೇದಿಕೆ ಎನ್ನಲಾದ ‘ಟಾಕ್ ಲೈಫ್’ ಮೊಬೈಲ್ ಆ್ಯಪ್ಅನ್ನು ಬಳಸಿಕೊಂಡು, ದಕ್ಷಿಣ ಏಷಿಯಾ ದೇಶಗಳ ಮಹಿಳೆಯರನ್ನು ಆನ್ಲೈನ್ ಪರಿಚಯ ಮಾಡಿಕೊಳ್ಳುತ್ತಿದ್ದ. ಅವರಿಗೆ ಹಣದ ಆಮಿಷವೊಡ್ಡಿ ಅವರ ಬೆತ್ತಲೆ ಚಿತ್ರಗಳನ್ನು, ವಿಡಿಯೋಗಳನ್ನು ತರಿಸಿಕೊಳ್ಳುತ್ತಿದ್ದ. ನಂತರ ಅವನ್ನು ಲೀಕ್ ಮಾಡುವುದಾಗಿ ಬೆದರಿಸಿ ಇನ್ನಷ್ಟು ಸಾಮಗ್ರಿ ಕಳುಹಿಸಲು ಬಲವಂತ ಮಾಡುತ್ತಿದ್ದ ಎನ್ನಲಾಗಿದೆ.
ಆರೋಪಿಯ ಮೊಬೈಲ್ ಫೋನನ್ನು ಜಪ್ತಿಪಡಿಸಿಕೊಂಡಿರುವ ಪೊಲೀಸರು, ಈ ಪ್ರಕರಣದಲ್ಲಿ ಇತರರು ಶಾಮೀಲಾಗಿದ್ದಾರೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.