ನನಗೆ ಕರೆ ಮಾಡಿ, ನಾನು ನಿಮಗಾಗಿ ಬೆತ್ತಲಾಗುತ್ತೇನೆ... ಪೂನಂ ಪಾಂಡೆ ವಿರುದ್ದವೂ ಕುಂದ್ರ ಸಂಚು..
Saturday, July 24, 2021
ಮುಂಬೈ: ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಬಂಧನದ ಬೆನ್ನಲ್ಲೇ ನಟಿ ಪೂನಂ ಪಾಂಡೆ ಇದೀಗ ಮತ್ತೊಂದು ಆರೋಪ ಹೊರಿಸಿದ್ದಾರೆ.
ಮೊದಲು ಕಾಂಟ್ರ್ಯಾಕ್ಟ್ ಮುಗಿದರೂ ನನ್ನ ಕಂಟೆಂಟ್ ಅನ್ನು ನಿರ್ದಾಕ್ಷಿಣ್ಯವಾಗಿ ಬಳಸಲು ಪ್ರಾರಂಭಿಸಿದರು ಎಂದು ಆರೋಪಿಸಿದ್ದಾರೆ.ನಾನು ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದಾಗ ನನ್ನ ಮೊಬೈಲ್ ನಂಬರ್ ಅನ್ನು ವೈಬ್ಸೈಟ್ನಲ್ಲಿ ಹರಿಬಿಟ್ಟಿದ್ದರು, ಜೊತೆಗೆ ಆ ನನ್ನ ವೈಯಕ್ತಿಕ ನಂಬರ್ನ ಕೆಳಗೆ ‘ನನಗೆ ಕರೆ ಮಾಡಿ, ನಾನು ನಿಮಗಾಗಿ ಬೆತ್ತಲಾಗುತ್ತೇನೆ’ ಎಂದು ಬರೆದು ಪೋಸ್ಟ್ ಮಾಡಿದ್ದರು ಎಂದು ಪೂನಂ ಆರೋಪಿಸಿದ್ದಾರೆ.
ಅವರ ಕಂಪನಿಯ ಜೊತೆ ಒಪ್ಪಂದ ಮಾಡಿಕೊಳ್ಳುವಂತೆ ನಿರಂತರ ಬೆದರಿಕೆ ಹಾಕುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದಿಷ್ಟೇ ಅಲ್ಲ
ವಲಸಿಗರಂತೆ ನಾನು ಬದುಕಿದ್ದೇನೆ
ಹೀಗೆ ನನ್ನ ನಂಬರ್ ಹರಿಬಿಟ್ಟ ನನಗೆ ಅಂತಾರಾಷ್ಟ್ರೀಯ ಕರೆಗಳು ಬರಲು ಆರಂಭವಾದವು. ಅಲ್ಲದೇ ಬೆದರಿಕೆ ಕರೆಗಳು, ಅಶ್ಲೀಲ ನಿಂದನೆಯ ಕರೆಗಳು ಸಹ ಬರುತ್ತಿದ್ದವು ಎಂದಿದ್ದಾರೆ.
ರಾಜ್ ಕುಂದ್ರಾ ನನಗೆ ಈ ರೀತಿ ಮಾಡಿದ್ದಾರೆ ಎಂದಾದರೆ ಬೇರೆಯವರ ಕಥೆ ಏನು..? ನಾನು ಎಲ್ಲಾ ನೋಂದವರಿಗೂ ಮನವಿ ಮಾಡುತ್ತೇನೆ, ದಯವಿಟ್ಟು ನಿಮಗಾದ ತೊಂದರೆ ಹೇಳಿಕೊಳ್ಳಿ, ಅನ್ಯಾಯದ ವಿರುದ್ಧ ದನಿ ಎತ್ತಿ ಎಂದು ಪೂನಂ ಕರೆ ಕೊಟ್ಟಿದ್ದಾರೆ.