ಮಂಗಳೂರಿನ ರೈಲ್ವೆ ಹಳಿಯಲ್ಲಿ ಭಾರಿ ಪ್ರಮಾಣದ ಗುಡ್ಡ ಕುಸಿತ-ಕೇರಳ, ಮುಂಬಯಿ ರೈಲು ಸಂಚಾರ ಸ್ಥಗಿತ (video)
Friday, July 16, 2021
ಮಂಗಳೂರು: ಮಂಗಳೂರಿನ ಕುಲಶೇಖರ ಬಳಿ ರೈಲ್ವೆ ಹಳಿಗೆ ಗುಡ್ಡ ಕುಸಿತದಿಂದ ಭಾರಿ ಪ್ರಮಾಣದ ಮಣ್ಣು ಬಿದ್ದಿದೆ.
ಮಂಗಳೂರಿನಲ್ಲಿ ಸುರಿದ ಮಳೆಗೆ ಕುಲಶೇಖರ ಸುರಂಗ ಬಳಿಯ ಗುಡ್ಡ ಕುಸಿತವಾಗಿ ಮಣ್ಣು ರೈಲ್ವೆ ಹಳಿಯಲ್ಲಿ ಬಿದ್ದಿದ್ದು ರೈಲ್ವೆ ಸಂಚಾರಕ್ಕೆ ತೊಡಕುಂಟಾಗಿದೆ. ಮಂಗಳೂರು ಜಂಕ್ಷನ್ ಮತ್ತು ತೋಕೂರು ರೈಲ್ವೆ ನಿಲ್ದಾಣದ ಮಧ್ಯೆ ಈ ಘಟನೆ ನಡೆದಿದೆ. ಕೇರಳ ಮತ್ತು ಮುಂಬಯಿ ನಡುವೆ ಸಂಚರಿಸುವ ರೈಲ್ವೆಗಳು ಈ ಹಳಿ ಮೂಲಕ ಸಾಗಬೇಕಾಗಿದ್ದು ಈ ನಡುವಿನ ರೈಲ್ವೆ ಸಂಚಾರಕ್ಕೆ ತೊಡಕಾಗಿದೆ. ಮಣ್ಣು ತೆರವಿನ ಬಳಿಕವಷ್ಟೆ ಈ ಹಳಿಯಲ್ಲಿ ರೈಲು ಸಂಚಾರ ಪುನರಾರಂಭವಾಗಲಿದೆ