ಒಪ್ಪೊ ರೆನೊ6 ಪ್ರೊ 5ಜಿ ಹಾಗೂ ರೆನೊ6 5ಜಿ ಫೋನ್ ಗಳು ಜುಲೈ 20ರಂದು ಭಾರತದಲ್ಲಿ ಬಿಡುಗಡೆ
Friday, July 16, 2021
ನವದೆಹಲಿ: ಒಪ್ಪೋ ಕಂಪೆನಿಯು ಭಾರತದಲ್ಲಿ ಒಪ್ಪೊ ರೆನೊ6 ಪ್ರೊ 5ಜಿ ಹಾಗೂ ರೆನೊ6 5ಜಿ ಎಂಬ ರೆನೊ ಸರಣಿಯ ಎರಡು ಮೊಬೈಲ್ ಫೋನ್ ಗಳನ್ನು ಬಿಡುಗಡೆ ಮಾಡಿದೆ.
ಜುಲೈ 20 ರಿಂದ ಮಾರಾಟ ಮಳಿಗೆಗಳು ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ರೆನೊ6 ಪ್ರೊ 5ಜಿ ಮೊಬೈಲ್ ಫೋನ್ 39,990 ರೂ.ಗೆ ಹಾಗೂ ರೆನೊ6 5ಜಿ ಫೋನ್ 29990 ರೂ. ಗೆ ದೊರಕಲಿವೆ. ಒಪ್ಪೊ ರೆನೊ ಸರಣಿಗಳಲ್ಲಿ ಉದ್ಯಮದಲ್ಲೇ ಮೊದಲು ಎನಿಸಿದ ಬೊಕೆ ಫ್ಲೇರ್ ಪೋರ್ಟೈಟ್ ವೀಡಿಯೊ, ಉದ್ಯಮದಲ್ಲೇ ಮುಂಚೂಣಿ ರೆನೊ ಗ್ಲೊ ವಿನ್ಯಾಸ ಮತ್ತು ಅಗ್ರಶ್ರೇಣಿಯ ಅನುಭವ ನೀಡುವ ಎಐ ಹೈಲೈಟ್ ವಿಡಿಯೊನಂಥ ವಿಶೇಷತೆಗಳನ್ನು ಹೊಂದಿದೆ. ರೆನೊ 6 ಸರಣಿಯ ರೆನೊ6 5ಜಿಯಲ್ಲಿ ಶಕ್ತಿಶಾಲಿ ಚಿಪ್‌ಸೆಟ್ ಎನಿಸಿದ ಮೀಡಿಯಾಟೆಕ್ ಡೈಮೆನ್ಸಿಟಿ 1200 ಹಾಗೂ ರೆನೊ6 5ಜಿಯಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 900 ಚಿಪ್‌ಸೆಟ್ ಅಳವಡಿಸಲಾಗಿದೆ. ರೆನೊ6 5ಜಿ ಮೀಡಿಯಾಟೆಕ್ ಡೈಮೆನ್ಸಿಟಿ 900 ಚಿಪ್‌ಸೆಟ್ ಹೊಂದಿರುವ ಭಾರತದ ಮೊಟ್ಟಮೊದಲ ಸ್ಮಾರ್ಟ್‌ಫೋನ್ ಆಗಿದೆ.
ರೆನೊ6 ಪ್ರೊ 5ಜಿ ಮತ್ತು ರೆನೋ6 5ಜಿ ಎರಡೂ ಫೋನ್ ಗಳ ಹಿಂಭಾಗಗಳಲ್ಲಿ ಎಐ 64ಎಂಪಿ ಕ್ವಾಡ್-ಕ್ಯಾಮೆರಾ ಸೆಟ್ ಅಪ್ ಮತ್ತು 32 ಎಂಪಿ ಫ್ರಂಟ್ ಕ್ಯಾಮೆರಾವನ್ನು ಹೊಂದಿವೆ. ಒಪ್ಪೋದ 10 ದಶಲಕ್ಷಕ್ಕಿಂತಲೂ ಹೆಚ್ಚು ಪೋರ್ಟೈಟ್ ಡೇಟಾಸೆಟ್‌ಗಳು ಮತ್ತು ಎಐ ಬೊಕೆ ಫ್ಲೇರ್ ಪೋರ್ಟೈಟ್ ವೀಡಿಯೋ ರಿಯಲ್‌ಟೈಮ್ ವೀಡಿಯೊ ಸಂಸ್ಕರಣಾ ವ್ಯವಸ್ಥೆಯ ಮೂಲಕ ಪೋರ್ಟೈಟ್ ವಿಡಿಯೊಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ನೀವು ರಾತ್ರಿಯಲ್ಲಿ ಚಿತ್ರೀಕರಣ ಮಾಡುತ್ತಿರಲಿ, ಅಥವಾ ಹಗಲಿನ ವೇಳೆ ಪ್ರಬಲ ಬ್ಯಾಕ್‌ಲೈಟ್‌ನೊಂದಿಗೆ ಚಿತ್ರೀಕರಣ ಮಾಡುತ್ತಿರಲಿ, ಎಐ ಹೈಲೈಟ್ ವೀಡಿಯೊ ಸ್ಪಷ್ಟವಾದ, ಪ್ರಖರವಾದ ಮತ್ತು ಹೆಚ್ಚು ಸ್ಪಷ್ಟವಾಗಿ ಬಣ್ಣದ ಪೋರ್ಟೈಟ್ ವೀಡಿಯೊಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ.
ಫೋನ್ ಗಳು 6.5-ಇಂಚಿನ 3ಡಿ ಬಾಗಿದ ಡಿಸ್‌ಪ್ಲೇ ಹೊಂದಿದ್ದು, 90ಎಚ್‌ಝೆಡ್ ರಿಫ್ರೆಶ್ ದರ ಮತ್ತು 180ಎಚ್‌ಝೆಡ್ ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಎದ್ದುಕಾಣುವ ದೃಶ್ಯ ಅನುಭವಕ್ಕಾಗಿ ಡಿಸ್‌ಪ್ಲೇ, ಎಚ್‌ಡಿಆರ್10+ ಪ್ರಮಾಣಿತವಾಗಿದೆ. ಈ ಡಿಸ್‌ಪ್ಲೇ ಉತ್ತಮ ಗುಣಮಟ್ಟದ ದೃಶ್ಯ ಅಂಶಕ್ಕಾಗಿ ನೆಟ್‌ಫ್ಲಿಕ್ಸ್ ಎಚ್‌ಡಿ ಮತ್ತು ಅಮೆಜಾನ್ ಫ್ರೇಮ್ ವೀಡಿಯೋ ಎಚ್‌ಡಿ / ಎಚ್‌ಡಿಆರ್ ಪ್ರಮಾಣೀಕರಿಸಲ್ಪಟ್ಟಿದೆ. ರೆನೋ6 ಪ್ರೊ 5ಜಿ ಕೇವಲ 7.6 ಮಿಮೀ ದಪ್ಪ ಮತ್ತು ಮತ್ತು 177 ಗ್ರಾಂ ತೂಕ ಹೊಂದಿದ್ದು, ರೆನೊ6 5ಜಿ 7.59 ಮಿಲಿಮೀಟರ್ ದಪ್ಪ ಹಾಗೂ 182 ಗ್ರಾಂ ತೂಕವನ್ನು ಹೊಂದಿದೆ. ರೆನೊ6 ಪ್ರೊ 5ಜಿ, 12 ಜಿಬಿ ರ್ಯಾಮ್ ಮತ್ತು 256 ಜಿಬಿ ಆಂತರಿಕ ಸಂಗ್ರಹ ಹೊಂದಿದ್ದು, ರೆನೋ6 5ಜಿ 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸಂಗ್ರಹವನ್ನು ಹೊಂದಿದೆ. ಇವೆರಡೂ 4500ಎಂಎಎಚ್ ಮತ್ತು 4300ಎಂಎಎಚ್ ಬ್ಯಾಟರಿ ಮತ್ತು 65ಡಬ್ಲ್ಯು ಸೂಪರ್ ವೂಕ್ 2.0 ಚಾರ್ಜರ್ ಅನ್ನು ಹೊಂದಿದೆ. ಕೇವಲ 31 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ ಎಂದು ಕಂಪನಿ ತಿಳಿಸಿದೆ. ಇದರ ಜತೆಗೆ ಎಂಕೋ ಎಕ್ಸ್ ಟ್ರೂ ವೈರ್‌ಲೆಸ್ ಶಬ್ದ ನಿರೋಧಕ ಇಯರ್‌ಫೋನ್‌ಗಳ ನೀಲಿ ಬಣ್ಣದ ಆವೃತ್ತಿ ಬಿಡುಗಡೆ ಮಾಡಿದೆ. ಇದಕ್ಕೆ 7 ದಿನಗಳವರೆಗೆ 1,000 ರೂ.ಗಳ ಬೆಲೆಕಡಿತ ಇದ್ದು ಈಗ ರೂ. 8,990 ಕ್ಕೆ ಲಭ್ಯವಿರುತ್ತದೆ.