ಅತ್ತೆ ಮಗಳಿಗೆ ಲೈನ್ ಹೊಡೆಯಲು ಹೋಗಿ ಆಸ್ಪತ್ರೆ ಸೇರಿದ ಯುವಕ... ಅಲ್ಲಿ ನಡೆದದ್ದೇನು ಗೊತ್ತಾ?
Friday, July 16, 2021
ಮೈಸೂರು: ಅತ್ತೆ ಮಗಳ ಮೇಲೆ ಕಣ್ಣುಹಾಕುತ್ತಿದ್ದಾನೆಂದು ಆರೋಪಿಸಿ ಯುವಕನೊಬ್ಬನನ್ನು ಸಂಬಂಧಿಕರು ಥಳಿಸಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಸಂಭವಿಸಿದೆ.
ಉತ್ತೇನಹಳ್ಳಿಯ ನಿವಾಸಿ ರಾಜು(25) ಎಂಬ ಯುವಕನನ್ನು ಸಂಬಂಧಿಕರು ಥಳಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ರಾಜು ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವತಿ ಮನೆ ಪಂಚವಳ್ಳಿ ಸರ್ಕಲ್ ಬಳಿ ಇರುವ ಪೆಟ್ರೋಲ್ ಬಂಕ್ ಮುಂದೆ ಇದೆ. ಇದರ ಮುಂಭಾಗ ಮೆಣಸಿನಕಾಯಿ ವ್ಯಾಪಾರಕ್ಕೆ ಕಿರಣ್ ಮಳಿಗೆ ಬಾಡಿಗೆ ಪಡೆದುಕೊಂಡಿದ್ದ. ಮೆಣಸಿನಕಾಯಿ ತುಂಬಲು ಆಗಾಗ ರಾಜು ಮಳಿಗೆಗೆ ಬರುತ್ತಿದ್ದ. ಈ ವೇಳೆ ಕಿರಣ್ ಎಂಬಾತನ ಅತ್ತೆ ಮಗಳ ಮೇಲೆ ರಾಜು ಕಣ್ಣು ಹಾಕಿದ್ದ ಯುವತಿಗೆ ಲೈನ್ ಹೊಡೆಯುತ್ತಿದ್ದಾನೆಂದು ಆತನಿಗೆ ಒಂದೆರಡು ಬಾರಿ ವಾರ್ನಿಂಗ್ ಕೊಟ್ಟಿದ್ದರು.
ಈ ಹಿನ್ನಲೆ ನಿನ್ನೆ ಸಂಜೆ ಪೆಟ್ರೋಲ್ ಹಾಕಿಸಲು ಬಂದ ರಾಜು ಮೇಲೆ ಹಲ್ಲೆ ಮಾಡಲಾಗಿದೆ. ಈ ಹಲ್ಲೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹಾಲಿನ ಕ್ಯಾನ್ನಿಂದ ಹಿಗ್ಗಾಮುಗ್ಗ ಥಳಿಸಿರುವುದನ್ನು ಇದರಲ್ಲಿ ಕಾಣಬುದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್, ಪುನೀತ್, ಪ್ರಕಾಶ್ ಹಾಗೂ ನವೀನ್ ಎಂಬುವವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.