ಲವ್ ಬ್ರೇಕಪ್ ಆಯ್ತು ಎಂದು ಸಿಕ್ಕ ಸಿಕ್ಕ ಕಾರು ಒಡೆದು ಹಾಕಿದ ಪಾಗಲ್ ಪ್ರೇಮಿ..
Friday, July 16, 2021
ಬೆಂಗಳೂರು: ಲವ್ ಬ್ರೇಕಪ್ ಆಗಿದ ಕಾರಣಕ್ಕೆ ಪ್ರೇಮಿಯೊಬ್ಬ ಸಿಟ್ಟಿನಿಂದ ಸಿಕ್ಕ ಸಿಕ್ಕ ಕಾರು ಒಡೆದು ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸತೀಶ್ (26) ಎಂಬಾತ ಈ ಕೃತ್ಯ ಎಸಗಿದ್ದಾನೆ. ತನ್ನ ಪ್ರೇಮ ಭಗ್ನವಾಯಿತು ಎನ್ನುವ ಲವ್ ಬ್ರೇಕಪ್ ಆಯ್ತು ಎನ್ನುವ ಕಾರಣಕ್ಕೆ ಕುಡಿದುಬಂದ ಸತೀಶ್ ನಿನ್ನೆ ತಡರಾತ್ರಿ 1-ಹೊರಗಡೆ ನಿಲ್ಲಿಸಿರುವ ಕಾರುಗಳನ್ನು ಒಡೆದು ಪುಡಿ ಮಾಡಿದ್ದಾನೆ. ಬಸವೇಶ್ವರ ನಗರ ಹಾಗೂ ಮಹಾಲಕ್ಷ್ಮಿ ಲೇಔಟ್ ಎರಡು ಕಡೆಗಳಲ್ಲಿ ಈತನ ಈ ಕೃತ್ಯ ನಡೆದಿದೆ.
ಬಸವೇಶ್ವರನಗರದಲ್ಲಿ ಐದು ಕಾರುಗಳು ಹಾಗೂ ಮಹಾಲಕ್ಷ್ಮಿ ಲೇಔಟ್ ನಲ್ಲಿ ಎರಡು ಕಾರುಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ. ಆರೋಪಿಯನ್ನು ಬಸವೇಶ್ವರ ನಗರ ಪೊಲೀಸರಿಂದ ಬಂಧಿಸಿ, ತನಿಖೆ ನಡೆಸಲಾಗುತ್ತಿದೆ.