
ವಧುವಿನ ಜತೆ ಯಾರೂ ಮಾತನಾಡಬಾರದು... ಕಂಡೀಷನ್ ಗೆ ಒಪ್ಪಿದ್ರೆ ಮಾತ್ರ ಮದ್ವೆಗೆ ಬನ್ನಿ... ವೈರಲ್ ಆಗಿದೆ ವಿವಾಹ ಆಮಂತ್ರಣ!
ಇಲ್ಲೊಂದು ಮದುವೆಗೆ ಬರುವ ಅತಿಥಿಗಳು ಏನು ಮಾಡಬೇಕು, ಏನು ಮಾಡಬಾರದು ಎಂದು ವಿಚಿತ್ರ ಎನಿಸುವಂಥ ಷರತ್ತು ವಿಧಿಸಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಈ ಪಟ್ಟಿಮಾಡಿದ ಮದುಮಕ್ಕಳು ಈ ಎಲ್ಲಾ ನಿಯಮಗಳನ್ನು ಪಾಲನೆ ಮಾಡುವುದಿದ್ದರೆ ಮಾತ್ರ ಮದುವೆಗೆ ಬನ್ನಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಈ ನಿಯಮ ಪಾಲನೆ ಮಾಡುವ ಮನಸ್ಸು ಇದ್ದವರು ಮದುವೆಗೆ ಬರುವ ಬಗ್ಗೆ ಇ-ಮೇಲ್ ಮೂಲಕ ತಿಳಿಸಿ ಎಂದು ಹೇಳಿದ್ದಾರೆ.
ಇಲ್ಲಿದೆ ನೋಡಿ ಷರತ್ತುಗಳು..
1) ಮದುವೆಗೆ ಬರುವವರು 15 ರಿಂದ 30 ನಿಮಿಷ ಬೇಗನೇ ಬರಬೇಕು.
2) ಬರುವಾಗ ಬಿಳಿ, ಕ್ರೀಮ್, ಬೂದು ಬಣ್ಣದ ಬಟ್ಟೆಗಳನ್ನು ಧರಿಸಬಾರದು.
3) ತಲೆಗೂದಲನ್ನು ಬಾಬ್ ಕಟ್ ತರಹ ಅಥವಾ ಪೋಣಿಸಿ ಕಟ್ಟಿದರೆ ಮಾತ್ರ ವಿವಾಹಕ್ಕೆ ಹಾಜರಾಗಬೇಕು.
4) ಮುಖಕ್ಕೆ ಮೇಕಪ್ ಹಚ್ಚಿಕೊಂಡು ಬರಬಾರದು.
5) ಮದುವೆಯ ಕ್ಷಣಗಳನ್ನು ವಿಡಿಯೋ ಮಾಡಬಾರದು.
6) ನಾವು ಸೂಚಿಸುವವರೆಗೂ ಫೇಸ್ ಬುಕ್ ಓಪನ್ ಮಾಡಬಾರದು
7)ಮದುವೆ ಫೋಟೋ ಪೋಸ್ಟ್ ಮಾಡಬೇಕಾದರೆ ಹ್ಯಾಶ್ ಟ್ಯಾಗ್ ಉಪಯೋಗಿಸಬೇಕು.
8) ವಧುವಿನ ಜತೆ ಯಾರೂ ಮಾತನಾಡಬಾರದು.
9) ಮದುವೆಗೆ ಆಗಮಿಸುವವರು ಸುಮಾರು ಐದೂವರೆ ಸಾವಿರ ರೂ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಉಡುಗೊರೆಗಳನ್ನು ತರಬೇಕು.