ಗಂಡನಿಗೆ ಹಣದಾಹ.. ಮಾವನಿಗೆ ಕಾಮದಾಹ.. ಪಾಪ ಈ ಯುವತಿಯ ನರಕ ಯಾತನೆ ಅಷ್ಟಿಷ್ಟಲ್ಲ...!!
Wednesday, July 28, 2021
ಬೆಂಗಳೂರು: ತವರು ಮನೆಯಿಂದ ಹಣ ತರುವಂತೆ ಇತ್ತ ಪತಿ ಕಿರುಕುಳ ಕೊಡುತ್ತಿದ್ದಾನೆ. ಇತ್ತ ಮಾವ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆ ಎಂದು 24 ವರ್ಷದ ಯುವತಿ ಬಸವನಗುಡಿ ಮಹಿಳಾ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾಳೆ.
ಗಂಡ ಹರೀಶ್(31) ಮತ್ತು ಈತನ ತಂದೆ ರಾಮಕೃಷ್ಣ(61) ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೋರಮಂಗಲ ನಿವಾಸಿ ಹರೀಶ್(31) 2016ರ ಏ.25ರಂದು ದೂರುದಾರ ಮಹಿಳೆಯನ್ನು ವಿವಾಹವಾಗಿದ್ದ. ನಂತರ ಮನೆಯಿಂದ 10 ಲಕ್ಷ ರೂಪಾಯಿ ತರುವಂತೆ ಗಂಡ ಕಿರುಕುಳ ಕೊಡುತ್ತಿದ್ದ. ಮಗ ಮನೆಯಲ್ಲಿ ಇಲ್ಲದ ವೇಳೆ ಮಾವ ರಾಮಕೃಷ್ಣ ಸೊಸೆ ಬಳಿ ಬಂದು, ನಿನಗೆ ಏನೇ ಸಹಾಯ ಬೇಕಾದರೂ ಮಾಡುತ್ತೇನೆ. ನನ್ನ ಆಸೆಗಳನ್ನು ತೀರಿಸಬೇಕು ಎಂದು ಒತ್ತಾಯ ಮಾಡುತ್ತಿದ್ದ. ಸ್ನಾನ ಮಾಡುವ ಸಮಯದಲ್ಲಿ ಬಲವಂತವಾಗಿ ಬಾಗಿಲು ತೆಗೆಸುವುದು, ಬಾಗಿಲು ತೆಗೆಯದಿದ್ದಾಗ ಕಿಟಕಿಯಲ್ಲಿ ಇಣುಕಿ ನೋಡಿ ಕಿರುಕುಳ ಕೊಡುತ್ತಿದ್ದ. ಎಂದು ದೂರಿನಲ್ಲಿ ವಿವರಿಸಲಾಗಿದೆ.