ಹುಣಸೂರು ತಾಲೂಕಿನ ಅಯ್ಯನಕೆರೆ ಹಾಡಿ ನಿವಾಸಿ ಸುರೇಶ್ ಎಂಬಾತ ಅಪ್ರಾಪ್ತೆಯೊಂದಿಗೆ ಪ್ರೀತಿಯ ನಾಟಕವಾಡಿ ಆಕೆಯನ್ನು ಗರ್ಭಿಣಿ ಮಾಡಿದ್ದಾನೆ. ಈ ವಿಚಾರ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗ್ತಿದೆ.
ಬಾಲಕಿಯು ನಡೆದ ಘಟನೆಯನ್ನು ತನ್ನ ತಾಯಿಯೊಂದಿಗೆ ಹೇಳಿಕೊಂಡಿದ್ದಾಳೆ. ನಂತರ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಅವರು ಪ್ರಕರಣ ದಾಖಲಿಸುತ್ತಿದ್ದಂತೆ, ಯುವಕ ಸುರೇಶ್ ನಾಪತ್ತೆ ಆಗಿದ್ದಾನೆ.