ರೇಪ್ ಆರೋಪ ಮಾಡಿದವಳನ್ನೇ ಮದುವೆಯಾಗಿ... ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆತ ಮಾಡಿದ್ದೇನು ಗೊತ್ತಾ..?
Wednesday, July 28, 2021
ನವದೆಹಲಿ: ಅತ್ಯಾಚಾರ ಆರೋಪದ ಬಳಿಕ ಸಂತ್ರಸ್ತೆಯನ್ನು ಮದುವೆ ಆಗಿದ್ದ ಆರೋಪಿ ಇದೀಗ ಪತ್ನಿಯನ್ನೇ ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ಆರೋಪಿಯನ್ನು ರಾಜೇಶ್ ಎಂದು ಗುರುತಿಸಲಾಗಿದೆ. ರಾಜೇಶ್, ಅತ್ಯಾಚಾರ ಆರೋಪದ ಮೇಲೆ ಜೈಲಿಗೆ ಹೋಗಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ಡಿಸೆಂಬರ್ನಲ್ಲಿ ಸಂತ್ರಸ್ತೆಯನ್ನು ಮದುವೆ ಆಗಿದ್ದ. ಇದಾದ ಆರೇ ತಿಂಗಳಲ್ಲಿ ಪತ್ನಿಯನ್ನು ಹತ್ಯೆ ಮಾಡಿ ಮತ್ತೊಮ್ಮೆ ಜೈಲು ಸೇರಿದ್ದಾನೆ.
ಮದುವೆಯಾದ ಕೆಲವೇ ದಿನಗಳಲ್ಲಿ ರಾಜೇಶ್, ಸಂತ್ರಸ್ತೆಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಆಕೆಯ ಪಾಲಕರು ಆರೋಪಿಸಿದ್ದಾರೆ. ಸಂತ್ರಸ್ತೆ ಒಮ್ಮೆ ಜಗಳ ಆಡಿಕೊಂಡು ತವರಿಗೂ ಬಂದುಬಿಟ್ಟಿದ್ದಳು. ಆದರೆ, ರಾಜೇಶ್ ಆಕೆಯ ಮನವೊಲಿಸಿ ವಾಪಸ್ ಕರೆದೊಯ್ದಿದ್ದನು. ಇದರ ನಡುವೆ ಜೂನ್ 11ರಂದು ತಾಯಿಯನ್ನು ನೋಡಿಕೊಂಡು ಬರುವುದಾಗಿ ಹೇಳಿ ಸಂತ್ರಸ್ತೆಯನ್ನು ಉತ್ತರಾಖಂಡದ ಉದಾಮ್ ಸಿಂಗ್ ನಗರಕ್ಕೆ ರಾಜೇಶ್ ಕರೆದೊಯ್ದಿದ್ದ. ಅಂದಿನಿಂದ ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಇದಾದ ಬಳಿಕ ಸಂತ್ರಸ್ತೆಯ ಪಾಲಕರು ಜೂನ್ 15ರಂದು ದೆಹಲಿ ದ್ವಾರಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಬಳಿಕ ರಾಜೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನೈನಿತಾಲ್ನಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ನಿರ್ಜನ ಪ್ರದೇಶದಲ್ಲಿ ದೈಹಿಕ ಸಂಪರ್ಕ ಬೆಳೆಸುವ ಆಸೆಯನ್ನು ವ್ಯಕ್ತಪಡಿಸಿದೆ. ಬಳಿಕ ಹತ್ತಿರದ ಗುಹೆಯೊಂದರ ಬಳಿ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿ, ಕತ್ತು ಹಿಸುಕಿ ಕೊಲೆ ಮಾಡಿದೆ ಎಂದು ಆರೋಪಿ ಕೊನೆಗೆ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು 201 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.