
ನಟಿ ಯಶಿಕಾ ಕಾರು ಅಪಘಾತ ಕೇಸ್: ಸ್ನೇಹಿತೆಯ ಸಾವಿಗೆ ಕಾರಣ ಏನು ಎಂದು ಮಾಹಿತಿ ಬಿಚ್ಚಿಟ್ಟ ನಟಿ...!!
Wednesday, July 28, 2021
ಚೆನ್ನೈ: ತಮಿಳು ಬಿಗ್ಬಾಸ್ ಖ್ಯಾತಿಯ ನಟಿ ಯಶಿಕಾ ಆನಂದ ಅವರ ಕಾರು ಅಪಘಾತಕ್ಕೀಡಾಗಿ ಅವರ ಸ್ನೇಹಿತೆ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಯಶಿಕಾಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಅಪಘಾತ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಯಶಿಕಾ ಪ್ರತಿಕ್ರಿಯೆ ನೀಡಿದ್ದಾರೆ. ಮಹಾಬಲಿಪುರಂ ಬಳಿಯ ತಡೆಗೋಡೆಗೆ ಯಶಿಕಾ ಅವರ ಟಾಟಾ ಹ್ಯಾರಿಯರ್ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.
ಯಶಿಕಾ ಪ್ರಕಾರ ಕಾರು ಚಲಾಯಿಸುತ್ತಿದ್ದು ಅವರೇ ಎಂದು ಒಪ್ಪಿಕೊಂಡಿದ್ದಾರೆ. ಅತಿ ವೇಗದಲ್ಲಿ ಕಾರು ಚಲಾಯಿಸಿದ್ದರಿಂದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆಯಿತು. ಭವಾನಿ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಡಿಕ್ಕಿಯ ರಭಸಕ್ಕೆ ಆಕೆ ಕಾರಿನ ಆಚೆಗೆ ಹಾರಿದ್ದಳು. ತಲೆಗೆ ಬಲವಾಗಿ ಪೆಟ್ಟು ತಕ್ಷಣ ಪ್ರಾಣ ಕಳೆದುಕೊಂಡಳು ಎಂದು ಯಶಿಕಾ ಹೇಳಿದ್ದಾರೆ. ಇದು ಡ್ರಂಕ್ ಆ್ಯಂಡ್ ಡ್ರೈವ್ ಕೇಸ್ ಅಲ್ಲ. ನಾನು ಮತ್ತು ಫ್ರೆಂಡ್ಸ್ ಡಿನ್ನರ್ ಮುಗಿಸಿಕೊಂಡು ಬರುವಾಗ ಈ ಅವಘಡ ಸಂಭವಿಸಿತು ಎಂದು ಹೇಳಿಕೊಂಡಿದ್ದಾರೆ. ಇನ್ನು ಮಾಧ್ಯಮ ವರದಿಗಳ ಪ್ರಕಾರ ಯಶಿಕಾ ಮಧ್ಯ ಸೇವನೆ ಮಾಡಿರುವ ಆರೋಪವಿದೆ. ಈ ಬಗ್ಗೆ ಪೊಲೀಸರು ಪ್ರಕರಣವನ್ನು ಸಹ ದಾಖಲಿಸಿಕೊಂಡಿದ್ದಾರೆ.