'ಪುಷ್ಪ' ಚಿತ್ರದ ಐಟಂ ಸಾಂಗ್‌ಗೆ ಡ್ಯಾನ್ಸ್ ಮಾಡಲು ಸನ್ನಿ ಲಿಯೋನ್ ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಗೊತ್ತಾ?
Wednesday, July 28, 2021
ಅಲ್ಲು ಅರ್ಜುನ್ ಅಭಿನಯದ ಟಾಲಿವುಡ್‌ನ ಸಿನಿಮಾ 'ಪುಷ್ಪ'. ತೆಲುಗು ಸೇರಿದಂತೆ ಇನ್ನಿತರ ಭಾಷೆಗಳಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ.
ದೇವಿ ಶ್ರೀ ಪ್ರಸಾದ್ ಸಂಗೀತ ನೀಡುತ್ತಿರುವ 'ಪುಷ್ಪ' ಚಿತ್ರದ ಸ್ಪೆಷಲ್ ಹಾಡಿನಲ್ಲಿ ಸೊಂಟ ಬಳುಕಿಸಲು ಸನ್ನಿ ಲಿಯೋನ್‌ಗೆ ಆಫರ್ ನೀಡಲಾಗಿದೆ. ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕುವ ಬಗ್ಗೆ 'ಪುಷ್ಪ' ಚಿತ್ರತಂಡ ಈಗಾಗಲೇ ಸನ್ನಿ ಲಿಯೋನ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ಯಂತೆ.
ವರದಿಗಳ ಪ್ರಕಾರ, 'ಪುಷ್ಪ' ಚಿತ್ರದ ಸ್ಪೆಷಲ್ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲು ಸಂಭಾವನೆಯಾಗಿ ನಟಿ ಸನ್ನಿ ಲಿಯೋನ್ ಬರೋಬ್ಬರಿ 50 ಲಕ್ಷ ರೂಪಾಯಿ ಕೇಳಿದ್ದಾರಂತೆ.