
Mangalore- ಗಂಡನಿಂದ ದೂರವಾಗಿದ್ದ ಮಹಿಳೆಯನ್ನು ಕಾರಿನಲ್ಲಿ ಅತ್ಯಾಚಾರ ಮಾಡಿದ ಆರೋಪಿ, ಮತ್ತೆ ಈತನದು ಮದುವೆಯಾಗಲು ಥ್ರೆಟ್!
Wednesday, July 28, 2021
ಮಂಗಳೂರು; ಗಂಡನಿಂದ ದೂರವಾಗಿದ್ದ ಮಹಿಳೆಯೊಬ್ಬರನ್ನು ಕಾರಿನಲ್ಲಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಮಾಡಿ ಆಕೆಯನ್ನು ಮದುವೆಯಾಗುವಂತೆ ಜೀವ ಬೆದರಿಕೆಯೊಡ್ಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಘಟನೆಯ ವಿವರ
ಮಹಿಳೆಯೊಬ್ಬರು ಮೂಡಬಿದ್ರೆಯ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದು, ಅವರ ಸಂಸಾರೀಕ ಜೀವನದಲ್ಲಿ ಬಿರುಕು ಉಂಟಾಗಿ ನ್ಯಾಯಾಲಯದಲ್ಲಿ ವಿಚ್ಚೇದನೆ ಪ್ರಕರಣ ವಿಚಾರಣೆಯಲ್ಲಿದೆ. ಈ ಮಹಿಳೆಯ ತಂದೆ ತಾಯಿಯ ಮನೆ ಚಿಕ್ಕದಾಗಿದ್ದು, ಬೇರೆ ವಾಸಿಸಲು ಬಾಡಿಗೆ ಮನೆಯನ್ನು ಹುಡುಕಿ 2 ತಿಂಗಳ ಹಿಂದೆ ಬೆಂಗರೆ ಕೂಳೂರು ನಿವಾಸಿ ಪ್ರಶಾಂತ್ ಅಪ್ಪು ಎಂಬುವರಿಂದ ಬಾಡಿಗೆ ಮನೆ ಪಡೆದಿದ್ದರು. ಬಳಿಕ ಅವರ ಬಟ್ಟೆ ಬರೆಗಳನ್ನು ಅಲ್ಲಿ ಇಟ್ಟು ಬಂದಿದ್ದು, ನಂತರ ಇವರಿಗೆ ಜ್ವರ ಬಂದಿದ್ದರಿಂದ ಬಾಡಿಗೆ ಮನೆಗೆ ತೆರಳಲು ಅಸಾದ್ಯವಾಗಿತ್ತು.ಈ ಸಮಯ ಮನೆಮಾಲೀಕ ಎಡೆಬಿಡದೆ ಫೋನ್ ಮಾಡಿ ಬಟ್ಟೆ ಬರೆಗಳನ್ನು ವಾಪಾಸ್ ಕೊಂಡು ಹೋಗುವಂತೆ ತಿಳಿಸಿದ್ದಾನೆ. ಜೂನ್ 8 ರಂದು ಸುಮಾರು 10.30 ಗಂಟೆಗೆ ಈತ ಕರೆ ಮಾಡಿ ಜೂನ್ 9 ರಂದು ಮನೆಯಲ್ಲಿದ್ದ ಬಟ್ಟೆ ಬರೆಗಳನ್ನು ಕುಂಟಿಕಾನದ ಪ್ಲೈ ಓವರ್ ಅಡಿಯಲ್ಲಿ ತಂದು ನೀಡುವುದಾಗಿ ತಿಳಿಸಿದ್ದ . ಅದರಂತೆ ಅಲ್ಲಿಗೆ ಮಹಿಳೆ ಹೋದಾಗ ಆರೋಪಿತನು ಬಟ್ಟೆ ತರಲು ಮರೆತು ಹೋಗಿದ್ದು, ನೀನು ಬಂದಲ್ಲಿ ಮನೆಯಿಂದ ಬಟ್ಟೆ ಕೊಡುವುದಾಗಿ ಆತನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಕಾರಿನಲ್ಲಿ ಹೋಗುವಾ ಸಮಯ ಈತ ಮಹಿಳೆಯೊಂದಿಗೆ ಆಶ್ಲೀಲವಾಗಿ ಮಾತನಾಡುತ್ತಾ, ಆತನ ಮನೆಗೆ ಹೋಗುವ ಒಳರಸ್ತೆಗೆ ಕಾರನ್ನು ಚಲಾಯಿಸಿ ಜನ ಸಂಚಾರ ಇಲ್ಲದ ಒಳ ಜಾಗದಲ್ಲಿ ಕಾರು ನಿಲ್ಲಿಸಿ ಬಲವಂತವಾಗಿ ಅತ್ಯಾಚಾರ ಮಾಡಿರುತ್ತಾನೆ. ನಂತರ ಅದೇ ಕಾರಿನಲ್ಲಿ ಆಕೆಯ ಮನೆಯ ಸಮೀಪ ಕರೆದುಕೊಂಡು ಬಂದಿದ್ದು, ಮುಖ್ಯ ರಸ್ತೆ ಸಿಕ್ಕಿದ ಕೂಡಲೇ ಕಾರಿನಿಂದ ಇಳಿದು ತಪ್ಪಿಸಿಕೊಂಡು ಹೋಗಿದ್ದರು. ಮರ್ಯಾದೆಯ ದೃಷ್ಟಿಯಿಂದ ದೂರು ದಾಖಲಿಸುವುದು ಬೇಡವೆಂದು ಮಹಿಳೆ ಸುಮ್ಮನಿದ್ದರು. ಆದರೆ ಆರೋಪಿಯು ಆಗಾಗ ಇವರಿಗೆ ಕರೆ ಮಾಡಿ, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದು, ಆತನ ಬೇಡಿಕೆಯನ್ನು ಮಹಿಳೆ ನಿರಾಕರಿಸಿದಾಗ ಮೊಬೈಲ್ ಗೆ ಮೆಸೇಜ್ ಮೂಲಕ ಮದುವೆಯಾಗದಿದ್ದಲ್ಲಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.