-->

ಒಬ್ಬನ ಜೊತೆಯಲ್ಲಿ ಇರಿಸಿಕೊಂಡಿರುವ ತಾಯಿ-ಮಗಳ ಅಕ್ರಮ ಸಂಬಂಧವನ್ನು‌ ಬೇಧಿಸಲು ಹೊರಟವನ ಬರ್ಬರವಾಗಿ ಹತ್ಯೆ

ಒಬ್ಬನ ಜೊತೆಯಲ್ಲಿ ಇರಿಸಿಕೊಂಡಿರುವ ತಾಯಿ-ಮಗಳ ಅಕ್ರಮ ಸಂಬಂಧವನ್ನು‌ ಬೇಧಿಸಲು ಹೊರಟವನ ಬರ್ಬರವಾಗಿ ಹತ್ಯೆ

ಕಾನ್ಪುರ: ಓರ್ವನ ಜೊತೆಯಲ್ಲಿಯೇ ತಾಯಿ ಮತ್ತು ಮಗಳು ಹೊಂದಿರುವ ಅಕ್ರಮ ಸಂಬಂಧ ಬೇಧಿಸಲು ಹೊರಟ ಯುವಕ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. 

ತಾಯಿ-ಮಗಳು ಇಬ್ಬರು ಒಬ್ಬನೊಂದಿಗೆಯೇ ಅನೈತಿಕ ಸಂಬಂಧ ಹೊಂದಿದ್ದರು. ಅವರ ಮನೆ ಮಗನಿಗೆ ತನ್ನ ತಾಯಿ ಹಾಗೂ ಸಹೋದರಿಯ ಈ ಸಂಬಂಧದ ಬಗ್ಗೆ ಗುಮಾನಿ ಇದ್ದಿತ್ತು. ಆದ್ದರಿಂದ ಇದು ಹೌದೋ ಅಲ್ಲವೋ ಎಂದು ತಿಳಿಯುವ ಸಲುವಾಗಿ ಈ ಬಗ್ಗೆ ಪತ್ತೆ ಮಾಡಲು ನವೀನ್‍ ಎಂಬಾತನಿಗೆ ಸೂಚಿಸಿದ್ದನು. ಈ ಹಿನ್ನೆಲೆಯಲ್ಲಿ ನವೀನ್​ ತಾಯಿ-ಮಗಳ ಹಿಂದೆ ವಿಷಯ ಕಲೆಹಾಕಲೆಂದು ಹೋಗುತ್ತಿದ್ದನು. ಆದರೆ ಈ ಬಗ್ಗೆ ತಾಯಿ - ಮಗಳಿಗೆ ಹೋಗೋ ತಿಳಿದು ಬಿಟ್ಟಿದೆ. ಆಮೇಲೆ ನಡೆದಿರೋದೇ ದುರಂತ.

ಅವರಿಬ್ಬರೂ ತಮ್ಮ ಕಾಮನ್​ ಗೆಳೆಯ ರಂಜಿತ್ ಪಾಲ್‍ಗೆ ವಿಷಯ ತಿಳಿಸಿ ಹತ್ಯೆ ಮಾಡಲು ಸಂಚು​ ನಡೆಸಿದ್ದಾರೆ. ಅದರಂತೆ ರಂಜಿತ್, ಮೊದಲಿಗೆ ನವೀನ್ ನ ಸ್ನೇಹ ಸಂಪಾದಿಸಿದ್ದಾನೆ. ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆತನ ಹತ್ಯೆ ಮಾಡಿದ್ದಾನೆ. ಪೊಲೀಸರು ತನಿಖೆ ಕೈಗೊಂಡಾಗ ರಂಜಿತ್ ಪಾಲ್ ಸಿಕ್ಕಿಬಿದ್ದಿದ್ದಾನೆ. ನಂತರ ಕೊಲೆಯ ವಿಷಯ ಬಾಯಿಬಿಟ್ಟಿದ್ದಾನೆ. ರಂಜಿತ್ ಹೇಳಿಕೆಯ ಮೇಲೆ ಇದೀಗ ಪೊಲೀಸರು ತಾಯಿ-ಮಗಳನ್ನು ಸಹ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99