ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ..

ಕಾನ್ಪುರ್​(ಉತ್ತರ ಪ್ರದೇಶ): ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ವಿವಾಹಿತೆಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶ ಕಾನ್ಪುರ್​​ದ ಗೋವಿಂದನಗರ ಪೊಲೀಸ್​ ಠಾಣಾ ಪ್ರದೇಶದಲ್ಲಿ ನಡೆದಿದೆ. 

2019ರಲ್ಲಿ ಪ್ರದೀಪ್​ ಆನಂದ್ ಶರ್ಮಾ ಜೊತೆ ವಿವಾಹ ಮಾಡಿಕೊಂಡಿದ್ದಳು. ಗಂಡನ ಸಹೋದರರೊಂದಿಗೆ ಬೇಸರಗೊಂಡು ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾಳೆ. ಪೂಜಾ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುಂಚಿತವಾಗಿ  ತನ್ನ ಸಹೋದರನಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವ್ಯಾಟ್ಸ್​ಆ್ಯಪ್ ಮಾಡಿದ್ದಾಳೆ. ಇದನ್ನ ನೋಡಿರುವ ಆಕೆಯ ಸಹೋದರ ತಕ್ಷಣವೇ ತಂದೆಗೆ ಮಾಹಿತಿ ನೀಡಿದ್ದಾನೆ. ಮಹಿಳೆಯ ತಂದೆ ಅಳಿಯನಿಗೆ ಫೋನ್ ಮಾಡಿ ಮಾಹಿತಿ ನೀಡಬೇಕು ಎನ್ನುವಷ್ಟರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆದರೆ ಸಾವನ್ನಪ್ಪಿದ್ದಾಳೆಂದು ವೈದ್ಯರು ಘೋಷಣೆ ಮಾಡಿದ್ದಾರೆ.