-->

ಮಂಗಳಮುಖಿಯಾಗಿ ಬದಲಾದ ಕೋಟ್ಯಾಧೀಶನ ಪುತ್ರ..!!

ಮಂಗಳಮುಖಿಯಾಗಿ ಬದಲಾದ ಕೋಟ್ಯಾಧೀಶನ ಪುತ್ರ..!!

ತೆಲಂಗಾಣ : ಕೋಟಿ ಆಸ್ತಿ ಹೊಂದಿದ್ದ ಯುವಕನೊಬ್ಬ ಮಂಗಳಮುಖಿಯಾಗಿ ಬದಲಾಗಿರುವ ಘಟನೆ ಇಲ್ಲಿನ ವೇಮುಲವಾಡದಲ್ಲಿ ನಡೆದಿದೆ. 

ಪೆದ್ದಪಲ್ಲಿ ಜಿಲ್ಲೆಯ ಮುಂಜಪಲ್ಲಿ ಗ್ರಾಮದ ವಂಗ ಮಹೇಶ್ ಎಂಬ ಯುವಕ ಕಳೆದೆರಡು ತಿಂಗಳಿನಿಂದ ನಾಪತ್ತೆಯಾಗಿದ್ದ.  ಹೀಗಾಗಿ, ಕುಟುಂಬಸ್ಥರು ಮಹೇಶ್​ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಅಷ್ಟರಲ್ಲೇ ಮಹೇಶ್​ ರಾಜನ್ನ ಸಿರಿಸಿಲ್ಲ ಜಿಲ್ಲೆಯ ವೇಮುಲವಾಡದಲ್ಲಿ ಇರುವುದು ಆತನ ಪೋಷಕರಿಗೆ ತಿಳಿದಿದೆ. ಕೂಡಲೇ ಪೋಷಕರು ಮಹೇಶ್​ ನೋಡಲು ತೆರಳಿದ್ರು. ಪ್ಯಾಂಟ್​, ಶರ್ಟ್​ ಹಾಕಿಕೊಂಡು ಸ್ಮಾರ್ಟ್​ ಆಗಿ ಕಾಣಿಸುತ್ತಿದ್ದ ಮಹೇಶ್​, ಏಕಾಏಕಿ ಮಂಗಳಮುಖಿಯಾಗಿ ಕಾಣಿಸಿದ್ದಾನೆ.
 
ಮಹೇಶ್​ಗೆ ನಮ್ಮ ಜೊತೆ ಬರುವಂತೆ ಬಂಧುಗಳು, ಸ್ನೇಹಿತರು ಮತ್ತು ಪೋಷಕರು ಹೇಳಿದ್ದಾರೆ. ಆದ್ರೆ, ಮಹೇಶ್​ ಇದಕ್ಕೆ ನಿರಾಕರಿಸಿದ್ದಾನೆ. ಹೀಗಾಗಿ, ಮಹೇಶ್​ ಮೇಲೆ ಸಿಡಿಮಿಡಿಗೊಂಡ ಪೋಷಕರು ರಸ್ತೆ ಮಧ್ಯೆದಲ್ಲೇ ಎಲ್ಲರೂ ನೋಡು-ನೋಡುತ್ತಿದ್ದಂತೆ ಹಿಗ್ಗಾಮುಗ್ಗಾ ಥಳಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಮಗೆ 20 ಎಕರೆ ಭೂಮಿ ಇದೆ. ಅವನಿಗೆ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ ಎಂದು ಮಹೇಶ್​ ಪೋಷಕರು ಕಣ್ಣೀರು ಹಾಕಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99