ಅಮೀರ್ ಖಾನ್-ಕಿರಣ್ ರಾವ್ ವಿಚ್ಛೇದನಕ್ಕೆ ಕಾರಣ ಯಾರು ಗೊತ್ತಾ..ಏನಿದು ಹೊಸ ಸುದ್ದಿ..!!
Sunday, July 4, 2021
ಮುಂಬೈ: ಬಾಲಿವುಡ್ ನಟ ಅಮಿರ್ ಖಾನ್ ತಮ್ಮ ಎರಡನೇ ಪತ್ನಿ ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿದ್ದಾರೆ. ಆದರೆ ಅವರು ಮುಂದಿನ ದಿನಗಳಲ್ಲಿ ಫಾತಿಮ ಅವರನ್ನು ಮದುವೆಯಾಗಬಹುದು ಎಂಬ ವಿಚಾರ ಕೇಳಿಬರುತ್ತಿದೆ.
ಅಮೀರ್ ಅವರು ಕಿರಣ್ ರಾವ್ ಜೊತೆಗಿನ 15 ವರ್ಷಗಳ ದಾಂಪತ್ಯ ಜೀವನ ಕಡಿದುಕೊಳ್ಳಲು ಫಾತಿಮಾ ಸನಾ ಶೇಖ್ ಅವರೇ ಕಾರಣ ಎನ್ನುವ ಸುದ್ದಿ ಕೇಳಿಬರುತ್ತಿದೆ.
ಅಮೀರ್ ಖಾನ್ ಅವರ ಕುಟುಂಬದೊಂದಿಗೆ ತುಂಬಾ ಆತ್ಮೀಯವಾದ ಸಂಬಂಧ ಹೊಂದಿರುವ ಫಾತಿಮಾ ಈಗ ಟ್ರೋಲ್ ಆಗುವುದರೊಂದಿಗೆ ಟ್ವಿಟರ್ನಲ್ಲಿ ಟ್ರೆಂಡ್ ಸಹ ಆಗುತ್ತಿದ್ದಾರೆ.
ಅಮೀರ್ ಖಾನ್ ಹಾಗೂ ಫಾತಿಮಾ ಸನಾ ಶೇಖ್ ಪ್ರೀತಿಯಲ್ಲಿದ್ದಾರೆ. ಅದೇ ಕಾರಣಕ್ಕೆ ತಮ್ಮ ಪತ್ನಿಗೆ ಈ ನಟ ಡಿವೋರ್ಸ್ ನೀಡಿದ್ದಾರೆ ಎನ್ನುವ ಅಭಿಪ್ರಾಯ ಹಲವರಿಂದ ವ್ಯಕ್ತವಾಗುತ್ತಿದೆ.