
ಒಂದು ದಿನದೊಳಗೆ ಲವ್ ಪ್ರಪೋಸಲ್ ಒಪ್ಪಿಕೊಳ್ಳಬೇಕು ಎಂದು ಡೆಡ್ಲೈನ್ ನೀಡಿದ ಪಾಗಲ್ ಪ್ರೇಮಿ..!! ಯುವತಿ ಮಾಡಿದ್ದೇನು ಗೊತ್ತಾ..?
Sunday, July 4, 2021
ಬೆಂಗಳೂರು: ಪ್ರೀತಿಸುವಂತೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಗೆ ಟಾರ್ಚರ್ ಕೊಡುತ್ತಿದ್ದ ಪಾಗಲ್ ಪ್ರೇಮಿಯನ್ನು ಪೋಲೀಸರು ಬಂಧಿಸಿದ್ದಾರೆ.
ನಾಗರಬಾವಿ ನಿವಾಸಿ ರಾಜೇಶ್ (22)ನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 3 ವರ್ಷಗಳ ಹಿಂದೆ ಯುವತಿಗೆ ರಾಜೇಶ್ ಪರಿಚಯವಾಗಿತ್ತು. ಕೆಲ ದಿನಗಳಿಂದ ಪ್ರೀತಿಸುವಂತೆ ಯುವತಿಯ ಹಿಂದೆ ಬಿದ್ದಿದ್ದ. ಈತನ ಪ್ರೇಮ ನಿವೇದನೆ ತಿರಸ್ಕರಿಸಿದಾಗ ನಿನ್ನ ಕೆಲವು ಅಶ್ಲೀಲ ಫೋಟೊಗಳು ನನ್ನ ಬಳಿಯಿದ್ದು, ಇದನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಹೆದರಿಸಿದ್ದ. ಸಾಲದು ಅಂತ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸಿದ್ದ. ಒಂದು ವೇಳೆ ನಾನು ಸತ್ತರೆ ನಿನ್ನ ಪಾಲಕರ ಹೆಸರನ್ನು ಬರೆದಿಡುತ್ತೇನೆ. ಆಗ ನೀವು ಜೈಲಿಗೆ ಹೋಗುತ್ತೀರಿ. ಅಪಹಾಸ್ಯ, ಅವಮಾನಕ್ಕೆ ಗುರಿಯಾಗಿ ಸಮಾಜದಲ್ಲಿ ನಿನ್ನನ್ನು ಯಾರೂ ಮದುವೆ ಮಾಡಿಕೊಳ್ಳಲು ಮುಂದೆ ಬರುವುದಿಲ್ಲ ಎಂದಿದ್ದ.
ಇದರಿಂದ ಆತಂಕಗೊಂಡ ಯುವತಿ ಚಂದ್ರಾ ಲೇಔಟ್ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.