
ಕಿರುಕುಳ ತಾಳಲಾರದೇ ಗ್ರಾಮ ಪಂಚಾಯತ್ ನಲ್ಲಿ ವಿಷ ಸೇವಿಸಿ ಯುವತಿ ಆತ್ಮಹತ್ಯೆ..
Wednesday, July 21, 2021
ಅನ್ನಪೂರ್ಣ ಪಾದಗಟ್ಟಿ(30) ಮೃತ ದುರ್ದೈವಿ. ಈಕೆ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಳು. ಪಂಚಾಯಿತಿಯಲ್ಲಿ ಏನೇ ನಡೆದರೂ ಗ್ರಾಮದ ಕೆಲ ಯುವಕರು ಯುವತಿ ಮೇಲೆಯೇ ದೂರು ನೀಡುತ್ತಿದ್ದರು ಎಂದು ಹೇಳಲಾಗಿದೆ. ಯುವಕರು ಅನ್ನಪೂರ್ಣಗೆ ನಿರಂತರ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವಿದೆ. ಇದರಿಂದ ಬೇಸತ್ತ ಯುವತಿ ಪಂಚಾಯಿತಿ ಕಚೇರಿಯಲ್ಲಿ ವಿಷಸೇವನೆ ಮಾಡಿದ್ದಾಳೆ.
ಅಸ್ವಸ್ಥಗೊಂಡಿದ್ದ ಯುವತಿಗೆ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅನ್ನಪೂರ್ಣ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಕೂಡಲೇ ಜಿಲ್ಲಾ ಆಸ್ಪತ್ರೆಗೆ ಕುಟುಂಬಸ್ಥರು ಧಾವಿಸಿದ್ದಾರೆ. ಕಿರುಕುಳ ನೀಡಿದ ಆರೋಪಿಗಳನ್ನು ಬಂಧಿಸುವವರೆಗೂ ಶವ ತೆಗೆದುಕೊಂಡ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸದ್ಯ ಅನ್ನಪೂರ್ಣ ಶವ ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿದೆ.
ಕಿರುಕುಳ ನೀಡಿದ ಆರೋಪಿಗಳ ಬಂಧನಕ್ಕೆ ಯುವತಿ ಸಂಬಂಧಿಕರು ಒತ್ತಾಯಿಸಿದ್ದಾರೆ.