ಮೊಬೈಲ್ ಹ್ಯಾಕ್ ಮಾಡಿ ಗೌಪ್ಯ ಮಾಹಿತಿ ಕದ್ದು ಬೆದರಿಕೆ ಹಾಕುತ್ತಿದ್ದ 16 ವರ್ಷದ ಹುಡುಗನ ಬಂಧನ..
Wednesday, July 21, 2021
ಸಿಂಗ್ರೌಲಿ ಜಿಲ್ಲೆ ಮಾರ್ವಾದಲ್ಲಿರುವ ಮನೆಯಲ್ಲಿ ಹುಡುಗನನ್ನು ಬಂಧಿಸಲಾಗಿದೆ. ಆರೋಪಿ ಕೆನಡಿಯನ್ ಫೋನ್ ನಂಬರ್ ಬಳಸಿ ವಾಟ್ಸ್ಆ್ಯಪ್ ಖಾತೆಯನ್ನು ಕ್ರಿಯೆಟ್ ಮಾಡಿದ್ದಾನೆ. ಅನಿವಾಸಿ ಭಾರತೀಯ ಯುವತಿ ಹೆಸರಿನಲ್ಲಿ ವಾಟ್ಸ್ಆ್ಯಪ್ ಖಾತೆಯನ್ನು ಸೃಷ್ಟಿಸಿ, ಜನರೊಂದಿಗೆ ಚಾಟ್ ಮಾಡಲು ಆರಂಭಿಸಿದ್ದಾನೆ. ಬಳಿಕ ಅಶ್ಲೀಲ ವಿಡಿಯೋ, ಆಡಿಯೋ ಹಾಗೂ ಫೋಟೋಗಳನ್ನು ಸಂಗ್ರಹಿಸಿ, ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಇಷ್ಟೇ ಅಲ್ಲದೆ, ಮೊಬೈಲ್ ಫೋನ್ಗಳನ್ನು ಹ್ಯಾಕ್ ಮಾಡಿರುವ ಹುಡುಗ ಗೌಪ್ಯ ಮಾಹಿತಿಗಳನ್ನು ಸಂಗ್ರಹಿಸಿದ್ದಾನೆ. ಸಂತ್ರಸ್ತರ ಫೋನ್ನಲ್ಲಿದ್ದ ಆಡಿಯೋ ಮತ್ತು ವಿಡಿಯೋಗಳನ್ನು ಹ್ಯಾಕ್ ಮೂಲಕ ಪಡೆದುಕೊಂಡು ಹಣಕ್ಕಾಗಿ ಬೆದರಿಕೆ ಹಾಕಿ ಹಲವರ ಬಳಿ ಹಣವನ್ನು ಪಡೆದಿದ್ದಾನೆ.
ಭಾರತದಲ್ಲಿ ಬ್ಯಾನ್ ಆಗಿರುವ ಆ್ಯಪ್ಗಳನ್ನು ಬಳಸಿಕೊಂಡು ಹ್ಯಾಕಿಂಗ್ ಅಧ್ಯಯನ ವಸ್ತುಗಳನ್ನು ಖರೀದಿಸಿ, ನಂತರ ಫೋನ್ಗಳನ್ನು ಹ್ಯಾಕ್ ಮಾಡಿ ಬೆದರಿಸಿ ಹಣ ಪಡೆದು ಮತ್ತಷ್ಟು ಹ್ಯಾಕಿಂಗ್ ಅಧ್ಯಯನ ವಸ್ತುಗಳನ್ನು ಖರೀದಿಸುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.