-->

ಕೆಲಸದಾಕೆಯ ಕೆಲಸಕ್ಕೆ ಫಿದಾ ಆಗಿ ಸಲೂನ್ ಓನರ್ ಮಾಡಿದ್ದೇನು ಗೊತ್ತಾ..? ಇದೊಂದು ಡಿಫರೆಂಟ್ ಸ್ಟೋರಿ.!

ಕೆಲಸದಾಕೆಯ ಕೆಲಸಕ್ಕೆ ಫಿದಾ ಆಗಿ ಸಲೂನ್ ಓನರ್ ಮಾಡಿದ್ದೇನು ಗೊತ್ತಾ..? ಇದೊಂದು ಡಿಫರೆಂಟ್ ಸ್ಟೋರಿ.!

 
ವಾಷಿಂಗ್ಟನ್: 15 ವರ್ಷದಿಂದ ಕೆಲಸ ಮಾಡುತ್ತಿದ್ದ ಮಹಿಳೆಯ ಕೆಲಸಕ್ಕೆ ಫಿದಾ ಆದ ಶಾಪ್ ಓನರ್ ಆಕೆಗೆ ಪೂರ್ತಿ ಶಾಪ್​ ಅನ್ನು ಕೇವಲ  75 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಈ ಘಟನೆ ಅಮೆರಿಕದಲ್ಲಿ ನಡೆದಿದೆ.

 ಪಿಯೊ ಇಂಪೆರತಿ (79) ಎಂಬ ವ್ಯಕ್ತಿ ಸಲೂನ್ ಒಂದನ್ನು ನಡೆಸುತ್ತಿದ್ದಾನೆ. ಈತ 1965ರಲ್ಲಿ ಆ ಸೆಲೂನ್ ಆರಂಭಿಸಿದ್ದ. 15 ವರ್ಷಗಳ ಹಿಂದೆ ತನ್ನ ವಿದ್ಯಾಭ್ಯಾಸ ಮುಗಿಸಿದ ಕ್ಯಾಥಿ ಮೌರಾ ಸಲೂನ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಳು. 15 ವರ್ಷಗಳಿಂದ ಕ್ಯಾಥಿ ಮೌರಾ ಅತ್ಯಂತ ಪ್ರಾಮಣಿಕವಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾಳಂತೆ. ಆಕೆ ಒಬ್ಬ ಉತ್ತಮ ಹೇರ್​ ಡ್ರೆಸ್ಸರ್ ಆಗಿ ಗ್ರಾಹಕರ ಮನಸ್ಸನ್ನು ಗೆದ್ದಿದ್ದಾಳಂತೆ. ಅದೇ ಖುಷಿಯಲ್ಲಿ ಇಂಪೆರತಿ ಆಕೆಗೆ ತನ್ನ ಸಲೂನ್​ ಅನ್ನು ಮಾರಾಟ ಮಾಡಿದ್ದಾನೆ. 

ಚಿಕ್ಕ ವಯಸ್ಸಿನಿಂದಲೂ ನನ್ನದೇ ಆದ ಬಿಜಿನೆಸ್ ಮಾಡಬೇಕೆಂಬ ಕನಸಿತ್ತು. ಆದರೆ ಅದು ಈ ರೀತಿಯಲ್ಲಿ ನನಸಾಗುತ್ತದೆ ಎಂದು ಎಂದುಕೊಂಡಿರಲಿಲ್ಲ. ಇಂಪೆರತಿಗೆ ಅದೆಷ್ಟು ಧನ್ಯವಾದ ಹೇಳಿದರೂ ಸಾಲದು ಎಂದಿದ್ದಾಳೆ  ಕ್ಯಾಥಿ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99