ಕೊರೊನಾ ಸಂಕಷ್ಟ ದ ನಡುವೆ ಆರ್ಥಿಕ ಚೇತರಿಕೆಗೆ Scdcc ಬ್ಯಾಂಕ್ ನಿಂದ 300 ಕೋಟಿ ಸಾಲ ವಿತರಣೆಗೆ ನಿರ್ಧಾರ (video)
Tuesday, July 13, 2021
ಕೋವಿಡ್ ನಿಂದಾಗಿ ಆರ್ಥಿಕ ಸಂಕಷ್ಟಗಳು ಎದುರಾಗಿರುವ ಹಿನ್ನೆಲೆ ಪುನಶ್ಚೇತನಕ್ಕಾಗಿ Scdcc ಬ್ಯಾಂಕ್ ನಿಂದ 300 ಕೋಟಿ ಸಾಲ ವಿತರಣೆಯನ್ನು ಜುಲೈ 14 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜುಲೈ 14 ರಂದು ರೈತ ಸ್ಪಂದನ ಕಾರ್ಯಕ್ರಮದ ಮೂಲಕ ಕೃಷಿಕರಿಗೆ, ಹೈನುಗಾರರಿಗೆ,ಮೀನುಗಾರರಿಗೆ, ಸ್ವಸಹಾಯ ಸಂಘಗಳಿಗೆ, ಎಲೆಕ್ಟ್ರಿಕ್ ವಾಹನ ಸಾಲ ಪಡೆಯುವವರಿಗೆ ಸಾಲಗಳನ್ನು ನೀಡಲಾಗುವುದು. ಸುಮಾರು700 ಗ್ರಾಹಕರಿಗೆ ರೂ 300 ಕೋಟಿ ಸಾಲವನ್ನು ನೀಡಲು ಚಿಂತಿಸಲಾಗಿದೆ. ಇದರಿಂದ ಸ್ಥಗಿತವಾದ ಆರ್ಥಿಕ ಚಟುವಟಿಕೆಗಳಿಗೆ ವೇಗ ಸಿಗಲಿದೆ ಎಂದರು.
ಕೋವಿಡ್ ನಿಂದ ಮೃತಪಟ್ಟ 152 ಮಂದಿಯ ಒಂದು ಲಕ್ಷ ರೂ. ಸಾಲ ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.