ವಿಷಯುಕ್ತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಮೃತ.. ಇಬ್ಬರ ಸ್ಥಿತಿ ಗಂಭೀರ...
Tuesday, July 13, 2021
ಚಿತ್ರದುರ್ಗ: ಒಂದೇ ಕುಟುಂಬದ ಮೂವರು ವಿಷಯುಕ್ತ ಆಹಾರ ಸೇವಿಸಿ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾದ ಘಟನೆ ಚಿತ್ರದುರ್ಗ ತಾಲೂಕು ಇಸಾಮುದ್ರ ಗ್ರಾಮದಲ್ಲಿ ಸಂಭವಿಸಿದೆ.
ತಿಪ್ಪಾನಾಯ್ಕ್(46), ಇವರ ಪತ್ನಿ ಸುಧಾಬಾಯಿ(43), ಗುಂಡಿಬಾಯಿ(75) ಮೃತರು. ರಾಹುಲ್ (18) ಮತ್ತು ರಮ್ಯ(16) ಅಸ್ವಸ್ಥಗೊಂಡಿದ್ದು, ಇವರೆಲ್ಲರೂ ಭಾನುವಾರ ರಾತ್ರಿ ಮನೆಯಲ್ಲಿ ರಾಗಿ ಮುದ್ದೆ, ಕಾಳಿನ ಸಾರು ಸೇವಿಸಿದ್ದರು, ಬಳಿಕ ಅಸ್ವಸ್ಥಗೊಂಡಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಮೂವರು ಬದುಕಲಿಲ್ಲ. ಮಕ್ಕಳಿಬ್ಬರನ್ನು ದಾವಣಗೆರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.