-->

SSLC ಪಠ್ಯವನ್ನು ಹೀಗೂ ಓದಬಹುದ?- ಮಂಗಳೂರಿನ ವಿದ್ಯಾರ್ಥಿನಿ ಆದಿಸ್ವರೂಪ ಮಾಡಿದ ತಂತ್ರಕ್ಕೆ ಸಿಕ್ಕಿದೆ ಇಂಡಿಯಾ ಬುಕ್ ಆಪ್ ರೆಕಾರ್ಡ್ ಗೌರವ (Video)

SSLC ಪಠ್ಯವನ್ನು ಹೀಗೂ ಓದಬಹುದ?- ಮಂಗಳೂರಿನ ವಿದ್ಯಾರ್ಥಿನಿ ಆದಿಸ್ವರೂಪ ಮಾಡಿದ ತಂತ್ರಕ್ಕೆ ಸಿಕ್ಕಿದೆ ಇಂಡಿಯಾ ಬುಕ್ ಆಪ್ ರೆಕಾರ್ಡ್ ಗೌರವ (Video)

ಮಂಗಳೂರು; ಎಸ್ ಎಸ್ ಎಲ್ ಸಿ ಯಲ್ಲಿ ಕಲಿಯುವ ವಿದ್ಯಾರ್ಥಿಗಳು ಫುಲ್ ಟೆನ್ಸನ್ ಮಾಡಿಕೊಂಡು‌ ಓದುವುದನ್ನು‌ ನೀವು ನೋಡಿರಬಹುದು. ಆದರೆ ಮಂಗಳೂರಿನ Sslc ಎಕ್ಸಾಂ ಬರೆಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ತನ್ನ ವಿಶೇಷ ಪ್ರತಿಭೆಯಿಂದ ಹೀಗೂ ಓದಬಹುದು ಎಂದು ತೋರಿಸಿಕೊಟ್ಟಿದ್ದಾಳೆ.




ಏನು ಮಾಡಿದಳು ಆದಿಸ್ವರೂಪ?

ಆದಿಸ್ವರೂಪ ಶಾಲೆಗೆ ಹೋಗದೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದಾಳೆ. ತನ್ನ ತಂದೆ ಗೋಪಾಡ್ಕರ್ ಅವರ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಈಕೆ ಸ್ವಕಲಿಕೆ ಮಾಡುತ್ತಿದ್ದಾಳೆ. ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಸ್ವಕಲಿಕೆಯನ್ನು ಹೇಗೆ ಮಾಡಬಹುದೆಂಬ 10 ತಂತ್ರಗಳು ಇದೆ. ಅದರಲ್ಲಿ ಒಂದು ತಂತ್ರದಲ್ಲಿ ಆದಿ ಸ್ವರೂಪ ಸಾಧನೆ ಮಾಡಿದ್ದಾಳೆ. Sslc ಯಲ್ಲಿ 6 ಪಠ್ಯ ವಿಷಯಕ್ಕೆ 10 ಪುಸ್ತಕ ಗಳಿದ್ದು ಇದನ್ನು ಈಕೆ 8  A4 ಶೀಟ್ ನಲ್ಲಿ ನೋಟ್ಸ್ ಮಾಡಿಕೊಂಡಿದ್ದಾಳೆ. ಒಂದೊಂದು A4 ಶೀಟ್ ನಲ್ಲಿ ಈಕೆ ದೇಶದ ಶೈಕ್ಷಣಿಕ ಸಮಸ್ಯೆಯ ಬಗ್ಗೆ ಚಿತ್ರ ಬಿಡಿಸಿದ್ದಾಳೆ  ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಈ ಚಿತ್ರದ ಒಳಗೆ ಆಕೆಯ ಪಠ್ಯಪುಸ್ತಕಗಳ ನೋಟ್ಸ್ ಇದೆ ಎನ್ನುವುದು ವಿಶೇಷ. ಅದರಲ್ಲಿ ಎಸ್ ಎಸ್ಎಲ್ ಸಿ ಪಠ್ಯವನ್ನು ಸಣ್ಣ ಸಣ್ಣ ಚಿತ್ರಗಳ ಮೂಲಕ ನೋಟ್ಸ್ ಮಾಡಿಕೊಂಡಿದ್ದಾಳೆ. ಹೀಗೆ 8 A4 ಶೀಟ್ ನಲ್ಲಿ 93000 ಕ್ಕೂ ಅಧಿಕ ಚಿತ್ರಗಳನ್ನು ಬಿಡಿಸಿ ನೋಟ್ಸ್ ಮಾಡಿಕೊಂಡಿದ್ದಾಳೆ. ಹೀಗೆ ನೋಟ್ಸ್ ಬರೆದ ಆದಿ ಸ್ವರೂಪ ಇದನ್ನು 20 ಗಂಟೆಯಲ್ಲಿ ಓದಿ ಮುಗಿಸಬಲ್ಲಲು. ಇದು ಆಕೆಗೆ Sslc ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗಿದೆ. 

ಆದಿ ಸ್ವರೂಪಗೆ ಸಾಧನೆ ಇಂಡಿಯಾ ಬುಕ್ ರೆಕಾರ್ಡ್ಸ್ ನಲ್ಲಿ ದಾಖಲೆ!

ಆದಿ ಸ್ವರೂಪ Sslc  ಕಲಿಯಲು ಹೀಗೆ ಮಾಡಿದ ಪ್ರಯೋಗ ಇಂಡಿಯಾ ಬುಕ್ ಅಪ್ ರೆಕಾರ್ಡ್ ದಾಖಲಾಗಿದೆ. Sslc ಓದುವುದರಲ್ಲಿ ಇನ್ನೂ ಇತರ ವಿಧಾನಗಳಿದ್ದು ಈ ದಾಖಲೆ ಸೇರಿದಂತೆ ಹತ್ತು ದಾಖಲೆ ಗಳನ್ನು ಆದಿ ಸ್ವರೂಪ ಮಾಡಲು ತಯಾರಾಗಿದ್ದಾಳೆ.



Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99