Mangalore- ಯುವತಿ ಸ್ನಾನ ಮಾಡುತ್ತಿದ್ದ ವೇಳೆ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್- ಬಾತ್ ರೂಂ ಬಳಿ ಬೆಂಚಿನ ಮೇಲೆ ನಿಂತು ಯುವಕನ ಕಾರುಬಾರು!
Saturday, July 17, 2021
ಮಂಗಳೂರು; ಯುವತಿಯೊಬ್ಬಳು ತನ್ನ ಮನೆಯ ಬಾತ್ ರೂಂ ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಯುವಕನೊಬ್ಬ ಬಾತ್ ರೂಂ ನ ಕಿಟಕಿಯಿಂದ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಪರಾರಿಯಾದ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಜುಲೈ 16 ರಂದು ಯುವತಿ ಕೆಲಸದಿಂದ ಮನೆಗೆ ಬಂದು ರಾತ್ರಿ 7-30 ಗಂಟೆಯ ಸುಮಾರಿಗೆ ತಮ್ಮ ಮನೆಯ ಒಳಗೆ ಇರುವ ಸ್ನಾನದ ಮನೆಯಲ್ಲಿ ಸ್ನಾನ ಮಾಡುವಾಗ ವ್ಯಕ್ತಿಯೊಬ್ಬ ಮೊಬೈಲ್ ಕ್ಯಾಮೆರಾವನ್ನು ಬಾತ್ ರೂಮ್ ಒಳಗೆ ಕಾಣಿಸುವಂತೆ ಚಿತ್ರೀಕರಣ ಮಾಡುತ್ತಿರುವುದು ಕಂಡುಬಂದಿದೆ. ಬಾತ್ ರೂಮ್ ಕಿಟಕಿಯ ಹೊರಗಡೆಯಿಂದ ಏನೊ ಅಲುಗಾಡುತ್ತಿರುವಂತೆ ಕಂಡುಬಂದಿದ್ದು ಯುವತಿ ಸರಿಯಾಗಿ ನೋಡಿದಾಗ ಬಾತ್ ರೂಮ್ ಕಿಟಕಿಯ ಹೊರಗಡೆಯಿಂದ ಬ್ಲೂ ಮತ್ತು ಗ್ರೇ ಬಣ್ಣದ ಕವರ್ ಹೊಂದಿದ್ದ ಮೊಬೈಲ್ ವೊಂದು ಕಂಡು ಬಂದಿದೆ. ಕೂಡಲೇ ಯುವತಿ ತಾಯಿಯ ಬಳಿ ಬಂದು ವಿಷಯವನ್ನು ಅವರಿಗೆ ತಿಳಿಸಿ ಟಾರ್ಚ್ ತೆಗೆದುಕೊಂಡು ಸ್ನಾನದ ಮನೆಯ ಹಿಂದುಗಡೆ ಬಂದು ಟಾರ್ಚ್ ಹಾಕಿ ನೋಡಿದಾಗ ಬಾತ್ ರೂಮ್ ಕಿಟಕಿಗೆ ಕಾಣುವ ಹಾಗೆ ಬೆಂಚ್ ವೊಂದನ್ನು ಹಾಕಿಕೊಂಡು ನಿಂತಿದ್ದ ವ್ಯಕ್ತಿಯೊಬ್ಬ ಅಲ್ಲಿಂದ ಓಡಿ ಪರಾರಿಯಾಗಿದ್ದಾನೆ.
ಸ್ನಾನ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಮನೆಯ ಪಕ್ಕದಲ್ಲಿ ಇರಿಸಿದ್ದ ಬೆಂಚೊಂದನ್ನು ಸ್ನಾನದ ಮನೆಗೆ ಕಾಣುವ ಹಾಗೆ ಇಟ್ಟುಕೊಂಡು, ಸ್ನಾನ ಮಾಡುತ್ತಿದ್ದ ಯುವತಿಯನ್ನು ಕದ್ದುನೋಡಿ ತನ್ನ ಮೊಬೈಲ್ ನಿಂದ ಚಿತ್ರಿಕರಣ ಮಾಡಿರಬಹುದಾಗಿರುತ್ತದೆ. ಈ ವ್ಯಕ್ತಿಯನ್ನು ಮುಂದಕ್ಕೆ ನೋಡಿದರೆ ಗುರುತಿಸ ಬಲ್ಲೆನು ಎಂದು ಯುವತಿ ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದಾಳೆ.