
ಪತ್ನಿಯನ್ನು ಕೊಂದವರ ಹತ್ಯೆಗೆ 20 ಸಾವಿರ ಬಹುಮಾನ- ಬಡರೈತ ಘೋಷಿಸಿದ್ದಾನೆ ಇನಾಮು!
Sunday, July 18, 2021
ಉತ್ತರಪ್ರದೇಶ : ತನ್ನ ಹೆಂಡತಿಯನ್ನು ಕೊಂದವನ ತಲೆಯನ್ನ ಕಡಿದು ತಂದು ಕೊಟ್ಟವರಿಗೆ ರೈತನೊಬ್ಬ 20 ಸಾವಿರ ರೂಪಾಯಿ ಬಹುಮಾನ ಘೋಷಿಸಿದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
ರೈತ ಮತ್ತು ಆತನ ಪತ್ನಿ ನಿವಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಶೆರ್ಪುರ್ ಗ್ರಾಮದಲ್ಲಿ ವಾಸವಾಗಿದ್ದಾರೆ. ರೈತನ ಪತ್ನಿ ಪವಿತ್ರಾಳನ್ನು ರೋಹಿತ್ ಮತ್ತು ಆತನ ಸ್ನೇಹಿತ ಅಭಿಷೇಕ್ ಎಂಬಾತ ಜುಲೈ 8ರಂದು ಗುಂಡಿಕ್ಕಿ ಕೊಂದಿದ್ದಾರೆ ಎಂದು ರೈತ ಆರೋಪಿಸಿದ್ದಾನೆ.
ಪವಿತ್ರಾ ಪ್ರೀತಿಗೆ ಒಪ್ಪದ ಕಾರಣ ಪವಿತ್ರಾಳ ನಾದಿನಿಯನ್ನು ರೋಹಿತ್ ಆತನ ಸ್ನೇಹಿತ, ಅಭಿಷೇಕ್ ಅಪಹರಿಸಲು ಯತ್ನಿಸಿದ್ದ. ಈ ಕೃತ್ಯವನ್ನು ಪವಿತ್ರಾ ತಡೆದಾಗ ಆರೋಪಿಗಳು ಆಕೆಗೆ ಗುಂಡು ಹಾರಿಸಿ, ಪರಾರಿಯಾಗಿದ್ದಾರೆ. ಈ ವೇಳೆ ಪವಿತ್ರಾ ಮೃತಪಟ್ಟಿದ್ದಾಳೆ.
ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರಿಗೆ ಇನ್ನೂ ಆರೋಪಿಗಳನ್ನು ಪತ್ತೆಹಚ್ಚಲಾಗದ ಹಿನ್ನೆಲೆ ರೈತ ಮತ್ತು ಆತನ ಕುಟುಂಬವು ಈಗ ಅಪರಾಧಿಗಳ ತಲೆ ತಂದುಕೊಟ್ಟವರಿಗೆ 20 ಸಾವಿರ ರೂಪಾಯಿ ಬಹುಮಾನವನ್ನು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ.