ಸಾಧಿಕ್ ಎಂಬಾತ ಅಪ್ರಾಪ್ತೆಗೆ ಪ್ರೀತಿಸುವಂತೆ ಒತ್ತಾಯಿಸಿದವನು. ಅಷ್ಟೇ ಅಲ್ಲದೆ ಇವನ ತಾಯಿ ಸಹ ಮನೆಗೆ ಬಂದು ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಅವರ ಇನ್ನೋರ್ವ ಮಗ ಕೂಡ ಚಾಕು ತೋರಿಸಿ ನಮ್ಮ ವಿರುದ್ಧ ಹೋದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ. ನಿಮ್ಮ ಮಗಳನ್ನು ನಮ್ಮ ಜೊತೆಗೆ ಕಳುಹಿಸಬೇಕು ಎಂದು ಬೆದರಿಕೆ ನೀಡಿದ್ದಾರೆ.
ಈ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.