
ರುಂಡ - ಮುಂಡ ಬೇರ್ಪಡಿಸಿ ಬರ್ಬರ ಹತ್ಯೆ: ಮಾಡೆಲ್ ಸೇರಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ..
Saturday, July 17, 2021
ಹುಬ್ಬಳ್ಳಿ: ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ನ್ಯಾಯಾಲಯಕ್ಕೆ ಸಾವಿರ ಪುಟಗಳ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಏಪ್ರಿಲ್ 9ರಂದು ಸಿನಿಮಾ ನಟಿ, ಮಾಡೆಲ್ ಶನಾಯ ಕಾಟವೆ ಅವಳ ಸಹೋದರ ರಾಕೇಶ ಕಾಟವೆ ಕೊಲೆ ನಡೆದಿತ್ತು. ಈ ಹತ್ಯೆಗೆ ಆಸ್ತಿಯೂ ಒಂದು ಪ್ರಮುಖ ಕಾರಣ ಎನ್ನಲಾಗಿದೆ. ಶನಾಯ ಹೆಸರಲ್ಲಿದ್ದ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿಗಾಗಿ ನಿಯಾಜ್ ಪ್ರೀತಿಯ ನಾಟಕವಾಡಿ ಇದಕ್ಕೆ ಅಡ್ಡಿಯಾಗಿದ್ದ ರಾಕೇಶನನ್ನು ಕೊಲೆ ಮಾಡಿದ್ದಾನೆ.ಶನಾಯ ಕಾಟವೆ ಪ್ರಿಯಕರ ನಿಯಾಜ್ ಕಾಟೀಗಾರ ಹಾಗೂ ಸಹಚರರು ಏಪ್ರಿಲ್ 9 ರಂದು ರಾಕೇಶ ಕಾಟವೆಯನ್ನು ಹತ್ಯೆ ಮಾಡಿದ್ದರು. ಆತನ ರುಂಡವನ್ನು ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹಾಗೂ ಮುಂಡವನ್ನು ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದರು. ಏಪ್ರಿಲ್ 12 ರಂದು ಪೊಲೀಸರಿಗೆ ರುಂಡ ಮುಂಡ ಪತ್ತೆಯಾಗಿತ್ತು.ಆರೋಪಿಗಳ ಪತ್ತೆಗೆ ಬಲೆ ಬೀಸಿದ ಗ್ರಾಮೀಣ ಠಾಣೆ ಪೊಲೀಸರು ಏಪ್ರಿಲ್ 18ರಂದು ಆರೋಪಿಗಳಾದ ಬೆಂಗೇರಿಯ ನಿಯಾಜ್ ಸೈಫುದ್ದೀನ್ ಕಾಟೇಗಾರ, ತೌಸೀಫ್ ಚನ್ನಾಪುರ, ಅಲ್ತಾಫ್ ಮುಲ್ಲಾ ಹಾಗೂ ಅಮನ್ ಗಿರಣಿವಾಲೆ ಎಂಬುವರನ್ನು ಬಂಧಿಸಿದ್ದರು.
ಈ ಕುರಿತು ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಹಾಗೂ ಪ್ರಕರಣದ ತನಿಖಾಧಿಕಾರಿ ರಮೇಶ ಗೋಕಾಕ್ ನೇತೃತ್ವದ ತಂಡ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.