ಮಾಲ್ ಒಳಗೆ ಹೋದ ಹೆಬ್ಬಾವು ಮಾಯ- ಹಳದಿ ಬಣ್ಣದ ಹಾವಿಗೆ ನಡೆದಿದೆ ಹುಡುಕಾಟ..
Thursday, July 8, 2021
ಅಮೆರಿಕದ ಲೂಸಿಯಾನಾದ ಮಾಲ್‌ನಲ್ಲಿ ಈ ಹೆಬ್ಬಾವನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಆದರೆ ಇದು ಏಕಾಏಕಿ ಇದು ತಪ್ಪಿಸಿಕೊಂಡು ಬಿಟ್ಟಿದೆ. ಈ ಮಾಲ್‌ನಲ್ಲಿ 140 ಮಳಿಗೆಗಳು ಇವೆ. ಈ ರಂಧ್ರದೊಳಗೆ ಹೆಬ್ಬಾವು ಸೇರಿಕೊಂಡಿರುವ ಸಾಧ್ಯತೆ ಇರುವ ಕಾರಣ, ಬಹುತೇಕ ಗೋಡೆಗಳನ್ನು ಕೆಡವಲು ಚಿಂತನೆ ನಡೆಸಲಾಗಿದೆ, ಇದಾಗಲೇ ಕೆಲವು ಕಡೆಗಳ ಗೋಡೆಗಳನ್ನು ಒಡೆದಿದ್ದರೂ ಹಾವು ಮಾತ್ರ ಕಾಣಿಸಿಕೊಂಡಿಲ್ಲ.
ಉರಗ ತಜ್ಞರು ಇದರ ಹುಡುಕಾಟ ಮುಂದುವರೆಸಿದ್ದಾರೆ. ಸಿಸಿಟಿವಿಗಳ ಪರಿಶೀಲನೆ ನಡೆಯುತ್ತಿದೆ, ಜತೆಗೆ ಮಾಲ್‌ಗೆ ಸಂಪರ್ಕ ಇರುವ ಕೊಳವೆಗಳನ್ನು ಅಕ್ಕ-ಪಕ್ಕದಲ್ಲಿ ಇರುವ ಬೃಹತ್ ರಂಧ್ರಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ಹಾವಿನ ಪ್ರಾಣಕ್ಕೆ ಹಾನಿಯಾಗದಂತೆ ಕಾಪಾಡುವುದೇ ತಮ್ಮ ಕರ್ತವ್ಯ ಎಂದಿದ್ದಾರೆ ಇಲ್ಲಿಯ ಅಧಿಕಾರಿಗಳು.